Monday, January 20, 2025
ಸುದ್ದಿ

ರೋಹಿಂಗ್ಯಾ ಮುಸಲ್ಮಾನರನ್ನು ಗಡಿಪಾರು ಮಾಡಿ, ದೇಶವನ್ನು ಉಳಿಸಿರಿ | ಪ್ರೊ. ಭಗವಾನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿರಿ ! – ಪುತ್ತೂರಿನಲ್ಲಿ ಹಿಂದುತ್ವವಾದಿಗಳ ಬೇಡಿಕೆ.

ಪುತ್ತೂರು : ಭಾರತಕ್ಕೆ ನುಗ್ಗಿ ಬಂದಿರುವ ರೋಹಿಂಗ್ಯಾ ಮುಸಲ್ಮಾನರನ್ನು ತಕ್ಷಣ ದೇಶದಿಂದ ಹೊರಗೆ ಹಾಕಬೇಕು ಹಾಗೂ ಅವರು ಮತ್ತೆ ಭಾರತದೊಳಗೆ ಪ್ರವೇಶಿಸುವುದನ್ನು ತಡೆಯಬೇಕು, “ಶ್ರೀರಾಮ ದೇವರಲ್ಲ, ಕವಿ ವಾಲ್ಮೀಕಿಯೂ ಸಹ ಅವರನ್ನು ದೇವರೆಂದು ಹೇಳಿಲ್ಲ, ಶ್ರೀರಾಮ ಜಾತಿವಾದಿ” ಇತ್ಯಾದಿ ಹೇಳಿಕೆಯನ್ನು ಕೊಟ್ಟು ಪ್ರೊ.ಕೆ.ಎಸ್.ಭಗವಾನರು ಕೋಟಿ ಕೋಟಿ ಹಿಂದೂಗಳ ಭಾವನೆಯನ್ನು ನೋಯಿಸಿದ್ದಾರೆ. ಆದುದರಿಂದ ಪ್ರೊ. ಭಗವಾನರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸ್ಥಳೀಯ ಸಮವಿಚಾರಿ ಹಿಂದುತ್ವವಾದಿ ಸಂಘಟನೆಗಳ ವತಿಯಿಂದ ಪುತ್ತೂರು ಬಸ್ ನಿಲ್ದಾಣದ ಬಳಿಯಿರುವ ಗಾಂಧಿ ಕಟ್ಟೆಯ ಬಳಿ, ಬೆಳಿಗ್ಗೆ 11.30 ಕ್ಕೆ `ರಾಷ್ಟ್ರೀಯ ಹಿಂದೂ ಆಂದೋಲನ’ ನಡೆಯಿತು. ನಂತರ ಸರಕಾರಕ್ಕೆ ಸಹಾಯಕ ಕಮಿಷನರ್ ಆಯುಕ್ತರ ಸಹಾಯಕರ ಮೂಲಕ ಮನವಿ ನೀಡಲಾಯಿತು. ಆಂದೋಲನವನ್ನು ಉದ್ದೇಶಿಸಿ ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕರಾದ ಶ್ರೀ ಚಂದ್ರ ಮೊಗೇರ, ಬಜರಂಗದಳ ಪ್ರಾಂತ ಗೋರಕ್ಷಾ ಪ್ರಮುಖ್ ಹಾಗೂ ಮಂಗಳೂರು ವಿಭಾಗ ಸಂಚಾಲಕರಾದ ಶ್ರೀ ಮುರಳಿಕೃಷ್ಣ ಹಸಂತಡ್ಕ, ಹಿಂದೂ ಮುಖಂಡರಾದ ಶ್ರೀ ಅರುಣ್ ಕುಮಾರ್ ಪುತ್ತಿಲ ಮಾತನಾಡಿದರು.

ರಾಷ್ಟ್ರೀಯ ಹಿಂದೂ ಆಂದೋಲನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕರಾದ ಶ್ರೀ ಚಂದ್ರ ಮೊಗೇರ ಮಾತನಾಡುತ್ತಾ, ಮ್ಯಾನ್ಮಾರ್‍ನಲ್ಲಿ ವಿಸ್ಥಾಪಿತಗೊಂಡಿರುವ ರೋಹಿಂಗ್ಯಾ ಮುಸಲ್ಮಾನರು ಜಮ್ಮುವಿನಿಂದ ದೆಹಲಿ, ಬಂಗಾಲ, ಬಿಹಾರ, ತೆಲಂಗಾಣಾ ಹೀಗೆ ಹಲವಾರು ರಾಜ್ಯಗಳಲ್ಲಿ ಕಾನೂನು ಬಾಹಿರವಾಗಿ ವಾಸಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬಾಂಗ್ಲಾದೇಶದಲ್ಲಿನ ರೋಹಿಂಗ್ಯಾ ಮುಸಲ್ಮಾನರು ಹಿಂದೂಗಳ ಮೇಲೆ ಅತ್ಯಾಚಾರ ನಡೆಸಿ, ಅವರ ಮತಪರಿವರ್ತನೆ ಮಾಡಲು ಪ್ರಯತ್ನಿಸಿದ್ದರು ಹಾಗೂ ನಮಾಜ್ ಪಠಿಸುವುದನ್ನು ಕಡ್ಡಾಯ ಮಾಡಿದ್ದರು. ಆದ್ದರಿಂದ ಸಂಪೂರ್ಣ ದೇಶದಲ್ಲಿ ಸಾಮಾನ್ಯ ನಾಗರಿಕರಿಗೆ ರೋಹಿಂಗ್ಯಾ ಮುಸಲ್ಮಾನರ ಮೇಲೆ ರೋಷವಿದೆ. ಆದ್ದರಿಂದ ಅವರಿಗೆ ದೇಶದಲ್ಲಿ ಎಲ್ಲಿಯೂ ವಾಸಿಸಲು ಬಿಡಬಾರದು, ಎಂಬುದು ಸಾಮಾನ್ಯ ನಾಗರಿಕರ ಅಭಿಪ್ರಾಯವಾಗಿದೆ. ಮತ್ತೊಂದು ಸಮಾಚಾರಕ್ಕೆ ಅನುಸಾರವಾಗಿ ರೋಹಿಂಗ್ಯಾ ಮುಸಲ್ಮಾನರು ಮ್ಯಾನ್ಮಾರಿನಲ್ಲಿ ಹಿಂದೂ ಹಾಗೂ ಬೌದ್ಧರ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ ಹಾಗೂ ಅವರಿಗೆ ಭಯೋತ್ಪಾದನೆ ಸಂಘಟನೆಯಾದ `ಅಲ್ ಕಾಯದಾ’ದೊಂದಿಗೆ ಸಂಬಂಧವಿದೆ. ಆದ್ದರಿಂದ , ಭಾರತಕ್ಕೆ ನುಗ್ಗಿ ಬಂದಿರುವ ರೋಹಿಂಗ್ಯಾ ಮುಸಲ್ಮಾನರನ್ನು ತಕ್ಷಣ ದೇಶದಿಂದ ಹೊರಗೆ ಹಾಕಬೇಕು ಹಾಗೂ ಅವರು ಮತ್ತೆ ಭಾರತದೊಳಗೆ ಪ್ರವೇಶಿಸುವುದನ್ನು ತಡೆಯಬೇಕು, ಎಂದರು.
ಹಿಂದೂ ಮುಖಂಡರಾದ ಶ್ರೀ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ರೋಹಿಂಗ್ಯಾ ಮುಸಲ್ಮಾನರನ್ನು ದೇಶದಿಂದ ಗಡಿಪಾರು ಮಾಡುವ ಕೆಲಸವನ್ನು ಸರಕಾರವು ಮಾಡಲಿ ಎಂದರು, ಭಾರತದಲ್ಲಿ ಶಾಶ್ವತದ ಶಾಂತಿಯುತವಾದ ವಾತಾವರಣಕ್ಕಾಗಿ ರೋಹಿಂಗ್ಯಾ ಮುಸಲ್ಮಾನರಂತಹ ಭಯೋತ್ಪಾದಕರ ಮೇಲೆ ಕ್ರಮ ಕೈಗೊಂಡು, ದೇಶದಿಂದ ಗಡಿಪಾರು ಮಾಡಬೇಕಿದೆ. ಭಾರತ ಹಾಗೂ ಇತರ ದೇಶಗಳಲ್ಲಿರುವ ಮುಸಲ್ಮಾನರು ಅವರಿಗೆ ಬೆಂಬಲ ನೀಡುತ್ತಿದ್ದಾರೆ. ವಿಶ್ವದ ಹಿಂದೂಗಳಿಗೆ ಏಕಮೇವ ಭಾರತವಷ್ಟೇ ಆಶಾಕಿರಣವಾಗಿದೆ. ಆದ್ದರಿಂದ ಭಾರತ ಸರಕಾರವು ರೋಹಿಂಗ್ಯಾ ಹಿಂದೂಗಳ ಸುರಕ್ಷೆಯಂತಹ ಗಂಭೀರ ವಿಷಯವನ್ನು ವಿಶ್ವದ ಮುಂದೆ ಬಹಿರಂಗಗೊಳಿಸಬೇಕಿದೆ. ಯಾವ ಶ್ರದ್ಧೆಯಿಂದ ನಾವು ಶ್ರೀರಾಮನನ್ನು ದೇವರೆಂದು ನಂಬಿ ದೇವರನ್ನು ಪೂಜಿಸುತ್ತೇವೆಯೋ ಅಂತಹ ಶ್ರೀರಾಮನ ಬಗ್ಗೆ ಮಾತನಾಡುವ ಯಾವುದೇ ನೈತಿಕ ಅಧಿಕಾರ ಇಲ್ಲದ ಪ್ರೊ.ಕೆ ಭಗವಾನ್ ನ ವಿರುದ್ಧ ನಾವಿಂದು ಆಂದೋಲನವನ್ನು ಸಮಾಜವನ್ನು ಜಾಗೃತಿಗೊಳಿಸುವ ಉದ್ದೇಶದಿಂದ ಮಾಡುತ್ತಿದ್ದೇವೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಬಜರಂಗದಳ ಪ್ರಾಂತ ಗೋರಕ್ಷಾ ಪ್ರಮುಖ್ ಹಾಗೂ ಮಂಗಳೂರು ವಿಭಾಗ ಸಂಚಾಲಕರಾದ ಶ್ರೀ ಮುರಳಿಕೃಷ್ಣ ಹಸಂತಡ್ಕ ಮಾತನಾಡುತ್ತಾ,
ಹಿಂದೂಗಳ ಶ್ರದ್ಧಾಸ್ಥಾನವಾದ ಗೋಮಾತೆಯ ಮಾಂಸವನ್ನು ಭಕ್ಷಣೆ ಮಾಡುವ, ಶ್ರೀರಾಮ ದೇವರ ಘೋರ ಅನಾದರ ಮಾಡುವ ಹಾಗೂ ಸಮಾಜದ ಶಾಂತಿಯನ್ನು ಕದಡುವ ಪ್ರೊ. ಕೆ. ಎಸ್ ಭಗವಾನರ ವಿರುದ್ಧ ಕಾನೂನು ಕ್ರಮವನ್ನು ಈಗಲಾದರೂ ಕೈಗೊಳ್ಳಿರಿ ಇಲ್ಲದಿದ್ದರೆ ಹಿಂದೂ ಸಮಾಜ ಇದಕ್ಕಾಗಿ ತೀವ್ರ ಹೋರಾಟ ನಡೆಸಲಿದೆ, ಎಂಬ ಎಚ್ಚರಿಕೆಯನ್ನು ನೀಡುತ್ತಿದ್ದೇವೆ. ಪದೇ ಪದೇ ಇಂತಹ ಹೇಳಿಕೆಗಳು ಬರುತ್ತಲೇ ಇರುತ್ತವೆ. ಅಷ್ಟೇ ಅಲ್ಲದೇ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂಗಳ ದೇವತೆಗಳ ಅನಾದರವನ್ನು ಮಾಡಿ ಸಾಮಾಜಿಕ ಶಾಂತಿಯನ್ನು ಭಂಗಗೊಳಿಸುವ ಪ್ರಯತ್ನವನ್ನೂ ಮಾಡಿದ್ದಾರೆ. ಆದುದರಿಂದ ಪ್ರೊ. ಕೆ ಎಸ್ ಭಗವಾನರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಪ್ರತಿಭಟನೆಯ ಮೂಲಕ ಆಗ್ರಹಿಸುತ್ತಿದ್ದೇವೆ. ಎಂದರು.
ಆಂದೋಲನದ ನಂತರ ಕೇಂದ್ರ ಗೃಹಮಂತ್ರಿಗಳಿಗೆ ಸಹಾಯಕ ಕಮಿಷನರ್ ಆಯುಕ್ತರ ಸಹಾಯಕರ ಮೂಲಕ ನೀಡಲಾದ ಮನವಿಯಲ್ಲಿ ಈ ಕೆಳಗಿನ ಬೇಡಿಕೆಗಳನ್ನು ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು


1.ಭಾರತದಲ್ಲಿ ಯಾವೆಲ್ಲಾ ಸಂಘಟನೆಗಳು, ವ್ಯಕ್ತಿ ಅಥವಾ ಧಾರ್ಮಿಕ ಮುಖಂಡರು ರೋಹಿಂಗ್ಯಾ ಮುಸಲ್ಮಾನರ ಪರ ವಹಿಸುವರೋ, ಅವರಿಗೆ ಆಂದೋಲನೆ ಅಥವಾ ಸಭೆ ನಡೆಸಲು ಅನುಮತಿ ನೀಡಬಾರದು. ಮುಂಬೈನಲ್ಲಿನ ಆಝಾದ ಮೈದಾನದಲ್ಲಿ ನಡೆದ ಗಲಭೆಯು ಪುನಾರಾವರ್ತನೆಗೊಳ್ಳದಂತೆ ಎಚ್ಚರಿಕೆ ವಹಿಸಬೇಕು.
2.ಜಮ್ಮುವಿನಲ್ಲಿ ರೋಹಿಂಗ್ಯಾ ಮುಸಲ್ಮಾನರಿಗೋಸ್ಕರ ತಯಾರು ಮಾಡುತ್ತಿರುವ ವಸತಿಗಳ ಮೇಲೆ ಕಾರ್ಯಾಚರಣೆ ನಡೆಸಬೇಕು !
ಆಂದೋಲನದಲ್ಲಿ `ರೋಹಿಂಗ್ಯಾ ಮುಸಲ್ಮಾನರನ್ನು ಓಡಿಸಿ, ದೇಶವನ್ನು ಕಾಪಾಡಿರಿ’, ಪೀಡಿತ ರೋಹಿಂಗ್ಯಾ ಹಿಂದೂಗಳಿಗೆ ನ್ಯಾಯ ಒದಗಿಸಿಕೊಡಿ’ ಇತ್ಯಾದಿ ಘೋಷಣೆಗಳನ್ನು ಮಾಡಲಾಯಿತು .

ಆಂದೋಲನದ ವೇಳೆ ಧರ್ಮಪ್ರೇಮಿಗಳಾದ ಶ್ರೀ ಹರಿಪ್ರಸಾದ್ ಶೆಟ್ಟಿ ನೆಲ್ಲಿಕಟ್ಟೆ, ಶ್ರೀ ಶರತ್ ಆಳ್ವ ಕೂರೇಲು, ಶ್ರೀ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಶ್ರೀ ಸೋಮನಾಥ, ಶ್ರೀ ರಾಜೇಶ್ ಪೆರಿಗೇರಿ, ಶ್ರೀ ಸಚಿನ್ ರೈ, ಶ್ರೀ ಮಾಧವ ರೈ ಕುಂಬ್ರ, , ಶ್ರೀ ಸೇಸಪ್ಪ ಗೌಡ ಬೆಳ್ಳಿಪ್ಪಾಡಿ, ಶ್ರೀ ಶ್ರೀಧರ್ ಸಾಲ್ಯಾನ್, ಶ್ರೀ ಹರೀಶ್ ದೋಲ್ಪಾಡಿ, ಗರುಡತೇಜದ ಆಟೋರಿಕ್ಷ ಸಂಘದ ಶ್ರೀ ಬಾಲಕೃಷ್ಣ ಗೌಡ ಸೇರಿದಂತೆ ಹಿಂದೂ ಜನಜಾಗೃತಿ ಸಮಿತಿಯ ಶ್ರೀ ಜನಾರ್ದನ ಗೌಡ, ಶ್ರೀ ದಯಾನಂದ, ಶ್ರೀ ರಮೇಶ, ಶ್ರೀ ಕೇಶವ ಗೌಡ, ಮೊದಲಾದವರು ಉಪಸ್ಥಿತರಿದ್ದರು.

ಆಂದೋಲನದ ಸೂತ್ರಸಂಚಾಲನೆಯನ್ನು ಕು. ಚೇತನಾ, ಘೋಷಣೆಗಳನ್ನು ಕಿರಣ್ ಮೆಲ್ಕಾರ್, ಶ್ರೀ ಪ್ರಶಾಂತ್ ಎನ್ಮಾಡಿ ಮಾಡಿದರು.

Leave a Response