Recent Posts

Monday, January 20, 2025
ಸುದ್ದಿ

ಪಂಪ್ ನಿರ್ವಹಣೆಯ ಶೆಡ್‌ಅನ್ನು ಪಂಚಾಯತ್ ಅನುಮತಿ ಪಡೆಯದೇ ಗುತ್ತಿಗೆದಾರೊಬ್ಬರು ಕೆಡವಿ ನೆಲಸಮ ಮಾಡಿದ್ದಾರೆ: ಪ್ರವೀಣ್ ತುಂಬೆ ಆರೋಪ – ಕಹಳೆ ನ್ಯೂಸ್

ಬಂಟ್ವಾಳ: ತುಂಬೆ ಗ್ರಾಮ ಪಂಚಾಯತ್‌ಗೆ ಒಳಪಟ್ಟ ಪಂಪ್ ನಿರ್ವಹಣೆಯ ಶೆಡ್‌ಅನ್ನು ಪಂಚಾಯತ್ ಅನುಮತಿ ಪಡೆಯದೇ ಗುತ್ತಿಗೆದಾರೊಬ್ಬರು ಕೆಡವಿ ನೆಲಸಮ ಮಾಡಿದ್ದಾರೆ ಎಂದು ತುಂಬೆ ಗ್ರಾಪಂ ಉಪಾಧ್ಯಕ್ಷ ಪ್ರವೀಣ್ ತುಂಬೆ ಆರೋಪಿಸಿದ್ದಾರೆ.

ಎಂಎಲ್‌ಸಿ ಐವನ್ ಡಿಸೋಜ ಅವರ ಅನುದಾನದಿಂದ ರಾಷ್ಟ್ರೀಯ ಹೆದ್ದಾರಿಯ ತುಂಬೆ ಜಂಕ್ಷನ್ ಬಳಿ ರಿಕ್ಷಾ ಪಾರ್ಕಿಂಗ್ ನಿರ್ಮಾಣದ ಕಾಮಗಾರಿ ನಡೆಯುತ್ತಿದ್ದು, ಈ ಬಗ್ಗೆಯು ಪಂಚಾಯತ್‌ನಿಂದ ಯಾವುದೇ ಅನುಮತಿ ಪಡೆದಿರುವುದಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವಿಚಾರವಾಗಿ ಇಂದು ಬೆಳಿಗ್ಗೆ ಗ್ರಾಪಂ ಸದಸ್ಯರ ಸಹಿತ ಉಪಾಧ್ಯಕ್ಷ ಪ್ರವೀಣ್ ಅವರ ನೇತೃತ್ವದಲ್ಲಿ ತುಂಬೆ ಜಂಕ್ಷನ್‌ನಲ್ಲಿ ಧರಣಿ ನಡೆಯಿತು. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್ಸೈ ಪ್ರಸನ್ನ ಸಹಿತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಹಾಗೂ ಗುತ್ತಿಗೆದಾರರ ನಡುವೆ ಮಾತಿನಚಕಮಕಿ ನಡೆಯಿತು. ತಹಶೀಲ್ದಾರ್ ಅವರು ಸ್ಥಳಕ್ಕೆ ಆಗಮಿಸುವಂತೆ ಧರಣಿನಿರತರು ಪಟ್ಟು ಹಿಡಿದರು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಕರು ಜಮಾಯಿಸಿದರು.

ಮಧ್ಯಾಹ್ನದ ಹೊತ್ತಿಗೆ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಅವರು ಸ್ಥಳ ಪರಿಶೀಲನೆ ನಡೆಸಿ, ಪಿಡಿಒ ಹಾಗೂ ಪಂ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿ, ಈ ಬಗ್ಗೆ ವರದಿ ನೀಡುವಂತೆ ಸೂಚಿಸಿದರು.

ಸಾರ್ವಜನಿಕ ಆಸ್ತಿಯನ್ನು ನಾಶಪಡಿಸಿದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸಲಾಗುವುದು.

ತುಂಬೆ ಗ್ರಾಮಸ್ಥರ ಬಹುಬೇಡಿಕೆಯಾಗಿರುವ ರಿಕ್ಷಾ ಪಾರ್ಕಿಂಗ್ ನಿರ್ಮಾಣಕ್ಕೆ ಎಲ್‌ಎಲ್ಸಿ ಅನುದಾನ ಮಂಜುರಾಗಿದ್ದು, ಇದರ ಕಾಮಗಾರಿಯು ನಡೆಯುತ್ತಿದೆ. ಇದಕ್ಕೆ ಸ್ಥಳೀಯ ವಾಣಿಜ್ಯ ಕಟ್ಟಡ ಮಾಲಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕು ಗ್ರಾಪಂ ಶೆಡ್ ಕೆಡವಿದ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ. ರಿಕ್ಷಾ ಪಾರ್ಕಿಂಗ್ ನಿರ್ಮಾಣದ ವಿಚಾರಕ್ಕೆ ಸಂಬಂಧಿಸಿ ಪಂಚಾಯತ್‌ನೊಂದಿಗೆ ಮನವಿ ಮಾಡಲಾಗುವುದು.