Friday, September 20, 2024
ಸುದ್ದಿ

ಶಬರಿಮಲೆಯಲ್ಲಿ ಬ್ರಹ್ಮಚರ್ಯಕ್ಕೆ ಪ್ರಾಧಾನ್ಯತೆ: ವೀರೇಂದ್ರ ಹೆಗ್ಗಡೆ – ಕಹಳೆ ನ್ಯೂಸ್

ಶಬರಿ ಮಲೆಗೆ ಹೆಣ್ಣು ಮಕ್ಕಳು ಹೋಗುವುದು ದೊಡ್ಡ ವಿಚಾರವಲ್ಲ, ಹೋದರೆ ಅಲ್ಲಿ ಏನಾಗುತ್ತದೆ ಎಂದು ಚರ್ಚೆ ಮಾಡುವ ವಿಚಾರವಲ್ಲ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಶಬರಿಮಲೆಯಲ್ಲಿ ಬ್ರಹ್ಮಚರ್ಯಕ್ಕೆ ಪ್ರಾಧಾನ್ಯತೆ ಇದೆ. ೪೮ ದಿನಗಳ ವ್ರತಾಚರಣೆ ಮಾಡುವುದು ಅಗತ್ಯ. ರಾಮಾಯಣದಲ್ಲಿ ರಾಮನನ್ನು ಆದರ್ಶ ಪಾತ್ರವಾಗಿ ಕಾಣುತ್ತಾರೆ. ಅವನು ಸಂಸಾರಿಯೇ ಆದರೂ ಬ್ರಹ್ಮಚಾರಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಯಾಕಂದರೆ ಅವನು ಸಂಸಾರದಲ್ಲಿದ್ದರೂ ಏಕಪತ್ನಿ ವ್ರತಸ್ಥನಾಗಿದ್ದ. ಕಲಿಯುಗದಲ್ಲಿ ಅದನ್ನು ಪಾಲನೆ ಮಾಡಲು ಆಗುವುದಿಲ್ಲ. ಆದರೂ ಮಾಡಬೇಕು. ಅದಕ್ಕೆ ಈ ರೀತಿಯ ಕೆಲವೊಂದು ನಿಯಮಗಳೆಲ್ಲಾ ಹಿರಿಯರು ಮಾಡಿದ್ದಾರೆ
ಆದರೆ ಇಂದಿನ ದಿನಗಳಲ್ಲಿ ಬೆಳಗ್ಗೆ ಮಾಲೆ ಹಾಕುತ್ತಾರೆ, ಮಧ್ಯಾಹ್ನ ಶಬರಿ ಮಲೆಗೆ ಹೋಗುತ್ತಾರೆ.

ಜಾಹೀರಾತು

ಹಾಗಾಗಿ ಆ ನಿಯಮಗಳನ್ನು ಪಾಲಿಸಲು ಕಷ್ಟವಾಗುತ್ತದೆ. ಹಾಗಾಗಿ ಮಹಿಳೆಯರ ಪ್ರವೇಶ ದೊಡ್ಡ ವಿಷಯವಲ್ಲ ಎಂದು ಹೇಳಿದರು. ಶಬರಿಮಲೆಗೆ ಸ್ತ್ರೀಯರು ಯಾಕೆ ಪ್ರವೇಶ ಮಾಡಬಾರದು ಎಂದು ನಾವು ವಿಮರ್ಶೆ ಮಾಡಿದರೆ, ಅದರಲ್ಲಿ ಆಚಾರ, ವಿಚಾರ, ಸಂಯಮ ಎಂಬುದಿದೆ ಎಂದರು.