ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ಹೊಂದಿದವರಿಗೆ ತಲೆನೋವಿನ ವಿಚಾರವೊಂದನ್ನ ಜಿಲ್ಲಾಡಳಿತ ಹೊರಡಿಸಿದೆ. ಹೌದು ನಗರದಲ್ಲಿ ಆಸ್ತಿ ಇರುವವರು ಇದೀಗ ಕಡ್ಡಾಯವಾಗಿ ಪ್ರಾಪರ್ಟಿ ಕಾರ್ಡ್ ಹೊಂದಿರಬೇಕೆಂದು ಜಿಲ್ಲಾಡಳಿತ ಆದೇಶಿಸಿದೆ.
ಜಿಲ್ಲಾಡಳಿತದ ಘೋಷಣೆಯ ಬಳಿಕ ನಗರದಲ್ಲಿ ಆಸ್ತಿ ಹೊಂದಿರುವ ಜನ ಇದೀಗ ಕಾರ್ಡ್ ಮಾಡಿಸಲು ಮುಂದಾಗಿದ್ದು, ಅಲೆದಾಟ ನಡೆಸುವಂತಾಗಿದೆ. ನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಮಾರಾಟ, ಖರೀದಿ ಮಾಡಬೇಕಾದರೆ ಪ್ರಾಪರ್ಟಿ ಕಾರ್ಡ್ ಕಡ್ಡಾಯ.
ಪ್ರಾಪರ್ಟಿ ಕಾರ್ಡ್ನಲ್ಲಿ ಖಾತೆ, ನಕ್ಷೆ, ಜಾಗದ ವಿವರ ಸೇರಿದಂತೆ ಇನ್ನೂ ಹೆಚ್ಚಿನ ವಿಚಾರಗಳು ಡಿಜಿಟಲೈಸ್ ಮಾಡಲಾಗಿರುವುದರಿಂದ ಎಲ್ಲಾ ವಿವರಗಳು ಕಾರ್ಡ್ನಲ್ಲಿ ಲಭ್ಯವಾಗುತ್ತವೆ. ಜಿಲ್ಲಾಡಳಿತ ಫೆಬ್ರವರಿಯಿಂದ ಕಡ್ಡಾಯ ಎಂದು ಹೇಳುತ್ತಿದ್ದು, ಅಷ್ಟರೊಳಗೆ ಆಸ್ತಿ ವ್ಯವಹಾರ ಮಾಡುವವರು ಕಾರ್ಡ್ ಹೊಂದುವುದು ಅಗತ್ಯವಾಗಿದೆ.
ಆರಂಭದಲ್ಲಿ ಡಿಸೆಂಬರ್‌ನಿಂದ ಪ್ರಾಪರ್ಟಿ ಕಾರ್ಡ್ ಕಡ್ಡಾಯ ಎಂದು ಆದೇಶಿಸಲಾಗಿತ್ತು. ಬಳಿಕ ಜನವರಿಯಿಂದ ಕಡ್ಡಾಯ ಎಂದು ಆದೇಶ ಹೊರಡಿಸಲಾಗಿತ್ತು. ಆದರೆ ಜನರು ಇನ್ನೂ ಪ್ರಾಪರ್ಟಿ ಕಾರ್ಡ್ ಮಾಡಿಸುವ ಗಡಿಬಿಡಿಯಲ್ಲಿ ನಿರತರಾಗಿದ್ದಾರೆ.
ಫೆಬ್ರವರಿ ೧ ರಿಂದ ಪ್ರಾಪರ್ಟಿ ಕಾರ್ಡ್ ಕಡ್ಡಾಯ ಎಂದು ಜಿಲ್ಲಾಡಳಿತ ಆದೇಶಿಸಿದೆ. ಜನರು ಪ್ರಾಪರ್ಟಿ ಕಾರ್ಡ್ ಮಾಡಿಸಲು ನಿರತರಾಗಿದ್ದು ಅದಕ್ಕೆ ಬೇಕಾದ ವ್ಯವಸ್ಥೆಗಳು ಸರಿ ಇಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ.