Recent Posts

Sunday, January 19, 2025
ಸುದ್ದಿ

ಕರ್ನಾಟಕದ ಹೆಮ್ಮೆ ಬಂಟರ ವಿಜಯ ಬ್ಯಾಂಕ್ ಮುಗಿದ ನೆನಪು: ಬರೋಡಾ ಬ್ಯಾಂಕ್‌ನಲ್ಲಿ ವಿಲೀನ – ಕಹಳೆ ನ್ಯೂಸ್

ದೇಶದ ಅತೀ ದೊಡ್ಡ ಬ್ಯಾಂಕ್‌ಗಳ ಪಟ್ಟಿಯಲ್ಲಿ ಇನ್ನು ಮುಂದೆ ಬ್ಯಾಂಕ್ ಅಫ್ ಬರೋಡಾ ಕೂಡ ಒಂದಾಗಿ ಹೊರಹೊಮ್ಮಲಿದೆ. ಈಗಾಗಲೆ ಎಸ್‌ಬಿಐ, ಐಸಿಐಸಿಐ ಬ್ಯಾಂಕ್ ದೇಶದ ಅತೀ ದೊಡ್ಡ ಬ್ಯಾಂಕ್‌ನ ಪಟ್ಟಿಯಲ್ಲಿದ್ದು, ನಂತರದ ಮೂರನೆ ಬ್ಯಾಂಕ್ ಆಗಿ ಬ್ಯಾಂಕ್ ಅಫ್ ಬರೋಡಾ ಇರಲಿದೆ.

ಹೌದು ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್‌ಗಳನ್ನು ಬ್ಯಾಂಕ್ ಅಫ್ ಬರೋಡಾ ಜೊತೆ ವಿಲೀನಗೊಳಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಏಪ್ರಿಲ್ ೧ ರಿಂದ ವಿಲೀನ ಜಾರಿಯಾಗಲಿದ್ದು, ವಿವಿಧ ಬ್ಯಾಂಕ್ಗಳನ್ನ ವಿಲೀನಗೊಳಿಸಿ ಪ್ರಬಲ ಬ್ಯಾಂಕಿಂಗ್ ಶಕ್ತಿಯನ್ನ ಸೃಷ್ಟಿಸುವ ಕೇಂದ್ರ ಸರ್ಕಾರದ ಪ್ರಯತ್ನಕ್ಕೆ ಬ್ಯಾಂಕ್ ಅಫ್ ಬರೋಡಾ ವಿಶೇಷ ಶಕ್ತಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತದಲ್ಲಿ ಬಹುತೇಕ ಅಗ್ರಗಣ್ಯ ಬ್ಯಾಂಕ್‌ಗಳು ಶುರುವಾಗಿದ್ದು ಕರ್ನಾಟಕದಲ್ಲಿ, ಅದರಲ್ಲೂ ಕರಾವಳಿಯಲ್ಲಿ. ಆದ್ರೆ ಇದೀಗ ಕರ್ನಾಟಕದಲ್ಲಿ ಬ್ಯಾಂಕಿಂಗ್ ಕ್ಷೇತ್ರ ಅತ್ಯಂತ ಪ್ರಬಲವಾಗಿದ್ದು ಸಮೃದ್ಧ ಇತಿಹಾಸವನ್ನ ಸೃಷ್ಟಿಸಿದೆ. ಈ ರಾಜ್ಯದಲ್ಲಿ ಪ್ರಾರಂಭವಾದ ಮೊದಲ ಬ್ಯಾಂಕುಗಳಲ್ಲಿ ವಿಜಯ ಬ್ಯಾಂಕ್ ಕೂಡ ಒಂದು.

೧೯೩೧ರ ಅಕ್ಟೋಬರ್ ೨೩ರಂದು ಮಂಗಳೂರಿನಲ್ಲಿ ಎ.ಬಿ. ಶೆಟ್ಟಿ ನೇತೃತ್ವದಲ್ಲಿ ಬಂಟ ಸಮುದಾಯದ ರೈತರೇ ಈ ವಿಜಯ ಬ್ಯಾಂಕ್ ಸ್ಥಾಪನೆ ಮಾಡಿದ್ದರು. ಅಗಾಧವಾಗಿ ಬೆಳೆದಿರುವ ವಿಜಯ ಬ್ಯಾಂಕ್ ಇದೀಗ ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನವಾಗುತ್ತಿದ್ದು, ಕರುನಾಡಿನ ಐತಿಹಾಸಿಕ ಬ್ಯಾಂಕುಗಳು ಇತಿಹಾಸಪುಟ ಸೇರುತ್ತಿರುವುದು ವಿಷಾದನೀಯ ವಿಚಾರವಾಗಿದೆ.
ಸುಮಿತ್ರ.ಬಿ ಕಹಳೆ ನ್ಯೂಸ್ ಪುತ್ತೂರು