ತಿರುವನಂತಪುರಂನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಉಗ್ರ ಪ್ರತಿಭಟನೆ ನಡೆಸಿದ್ದಾರೆ. ಅಯ್ಯಪ್ಪ ಕ್ಷೇತ್ರಕ್ಕೆ ಮಹಿಳಾ ಪ್ರವೇಶ ವಿಚಾರಕ್ಕೆ ಸಂಭಂಧಿಸಿದ್ದಂತೆ ಪ್ರತ್ಯಕ್ಷವಾಗಿ ಪೊಲೀಸರು ಸಹಾಯ ಮಾಡಿದ್ದಾರೆಂದು ಕಾಂಗ್ರೇಸ್ ಕಾರ್ಯಕರ್ತರು ಆರೋಪಿಸಿದ್ದಾರೆ.
ಇನ್ನು ಈ ವೇಳೆ ಕೇರಳ ಸಿಎಂ ಪಿಣರಾಯಿ ವಿಜಯನ್ ಪ್ರತಿಕೃತಿ ದಹನ ಮಾಡಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೂ ಪ್ರತಿಭಟನೆ ವೇಳೆ ನಮ್ಮ ಮುಖ್ಯಮಂತ್ರಿ ಹುಚ್ಚ- ಹುಚ್ಚ ಎಂದು ಧಿಕ್ಕಾರಗಳನ್ನು ಕೂಗಿ ಕೇರಳ ಸರ್ಕಾರದ ವಿರುದ್ದ ಕೆಂಡಮಂಡಲವಾದರು.