Sunday, November 24, 2024
ಸುದ್ದಿ

ರಾಷ್ಟ್ರಪತಿ ಭಾಷಣದಲ್ಲಿಯೂ ರಾಜಕೀಯ ಮಾಡಿದ ರಾಜ್ಯ ಸರ್ಕಾರ | ಟಿಪ್ಪು ಹೆಸರು ಬಳಸಿಕೊಂಡ ಸಿದ್ದು ಸರ್ಕಾರ..?

ಬೆಂಗಳೂರು : ವಿಧಾನಸೌಧದ ವಜ್ರಮಹೋತ್ಸವದ ಭಾಷಣ ಕಾಂಗ್ರೆಸ್ ಸಂಭ್ರಮಕ್ಕೆ ಕಾರಣವಾದರೆ, ಬಿಜೆಪಿಯವರ ತೀವ್ರ ಮುಜುಗರಕ್ಕೆ ಕಾರಣವಾಯ್ತು. ಮೊದಲ ಬಾರಿಗೆ ವಿಶೇಷ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಬ್ರಿಟಿಷರ ವಿರುದ್ಧ ಹೋರಾಡಿ ಟಿಪ್ಪು ಸುಲ್ತಾನ್ ವೀರ ಮರಣವನ್ನಪ್ಪಿದ ಎಂದು ರಾಷ್ಟ್ರಪತಿ ಭಾಷಣದಲ್ಲಿ ಉಲ್ಲೇಖಿಸಿದರು. ಭಾಷಣದಲ್ಲಿ ಟಿಪ್ಪುಸುಲ್ತಾನ್ ಬಗ್ಗೆ ಉಲ್ಲೇಖಿಸಿದ ರಾಷ್ಟ್ರಪತಿಗಳು, ಟಿಪ್ಪು ಕ್ಷಿಪಣಿ ತಂತ್ರಜ್ಞಾನದ ಜನಕ ಎಂದು ಹಾಡಿಹೊಗಳಿದರು. ಇದಕ್ಕೆ ಕಾಂಗ್ರೆಸ್ ಶಾಸಕರು ಮೇಜುಕುಟ್ಟಿ ಸ್ವಾಗತಿಸಿದರೆ, ಬಿಜೆಪಿ ಶಾಸಕರು ಮಾತ್ರ ಸುಮ್ಮನೆ ಕುಳಿತಿದ್ದರು.

ಇವತ್ತು ಅವಿಸ್ಮರಣೀಯ ದಿನ. ಭಾರತ ಪ್ರಜಾಪ್ರಭುತ್ವದಲ್ಲಿ ಮರೆಯಲಾಗದ ದಿನ. ವಜ್ರಮಹೋತ್ಸವದಲ್ಲಿ ಭಾಗವಹಿಸಿರುವ ನನಗೂ ಅವಿಸ್ಮರಣೀಯ ದಿನ. ಪಾರ್ಲಿಮೆಂಟ್ರಿ ಡೆಮಾಕ್ರಸಿ ಇತಿಹಾಸದಲ್ಲಿ ಇದೊಂದು ಮಹತ್ವದ ದಿನ. 14ನೇ ರಾಷ್ಟ್ರಪತಿಯಾಗಿ ಇಂಥಹ ಮಹತ್ವದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೇನೆ. ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಕರ್ನಾಟಕಕ್ಕೆ ಇದು ನನ್ನ ಮೊದಲ ಭೇಟಿ ಎಂದರು.
ಇದೇ ವೇಳೆ ಮಾಜಿ ಮುಖ್ಯಮಂತ್ರಿಗಳ ಹೆಸರನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಉಲ್ಲೇಖಿಸಿದರು. ನಿಜಲಿಂಗಪ್ಪ, ದೇವರಾಜ ಅರಸ್, ರಾಮಕೃಷ್ಣ ಹೆಗಡೆ ಹೆಸರು ಉಲ್ಲೇಖಿಸಿದರು. ಆಗ ವೈಎಸ್‍ವಿ ದತ್ತಾ, ದೇವೇಗೌಡರು ಎಂದರು. ಇದಕ್ಕೆ ಕೋವಿಂದ್, ಹೌದು ದೇವೇಗೌಡರು ನನ್ನ ಸ್ನೇಹಿತ, ನಾನು ಹೇಳಲು ಬಯಸುತ್ತಿದ್ದೆ ಎಂದರು. ಆಗ ಕೆಲವರು ಬಂಗಾರಪ್ಪ ಎಂದರು. ಇದಕ್ಕೆ ರಾಷ್ಟ್ರಪತಿಗಳು, ಫ್ರೆಂಡ್ಸ್ ನಾನು ಕೆಲವರ ಹೆಸರನ್ನು ಮಾತ್ರ ಹೇಳುತ್ತಿದ್ದೇನೆ ಎಂದರು. 15 ನಿಮಿಷಗಳಲ್ಲಿ ರಾಷ್ಟ್ರಪತಿ ಭಾಷಣ ಅಂತ್ಯಗೊಳಿಸಿದರು.
ಆದ್ರೆ ರಾಷ್ಟ್ರಪತಿಯ ಭಾಷಣವನ್ನು ರಾಜ್ಯ ಸರ್ಕಾರವೇ ರಚಿಸುವುದು ಅನ್ನೋ ಮಾತು ಇದೆ ಹಾಗಾಗಿ ಇನ್ನು ಹಲವು ರಾಜಕೀಯ ಮತ್ತು ಹಿರಿಯರ ಹೆಸರು ಕಡೆಗಣಿಸಿ ಟಿಪ್ಪು ಹೆಸರು ತೆಗೆದುಕೊಂಡು ರಾಷ್ಟಪತಿ ಭಾಷಣದಲ್ಲಿಯೂ ರಾಜಕೀಯ ಮಾಡಿದೆ ಅನ್ನೋ ಕೂಗು ಕೇಳಿಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response