Sunday, November 24, 2024
ಸುದ್ದಿ

ವಿವೇಕಾನಂದ ಪದವಿ ಕಾಲೇಜಿಗೆ ತ್ರಿವಳಿ ರ‍್ಯಾಂಕ್‌ಗಳ ಹಿರಿಮೆ – ಕಹಳೆ ನ್ಯೂಸ್

ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯವು ೨೦೧೮ರ ಎಪ್ರಿಲ್ ಮೇಯಲ್ಲಿ ನಡೆಸಿದ ಪದವಿ ಪರೀಕ್ಷೆಯ ಫಲಿತಾಂಶದಲ್ಲಿ ಇಲ್ಲಿನ ವಿವೇಕಾನಂದ ಕಾಲೇಜಿಗೆ ಮೂರು ರ‍್ಯಾಂಕ್‌ಗಳು ಲಭಿಸಿವೆ.

ಬಿ.ಸಿ.ಎ ವಿಭಾಗದಲ್ಲಿ ಸುಳ್ಯದ ಕೊಡಿಯಾಲ ಗ್ರಾಮದ ಶೀನಪ್ಪ ಪೂಜಾರಿ ಹಾಗೂ ಯಶೋದ ದಂಪತಿ ಪುತ್ರಿ ಶ್ರೇಯಾ ಎಸ್ ಒಟ್ಟು ೫೦೦೦ ಅಂಕಗಳಲ್ಲಿ ೪೮೦೨ ಅಂಕಗಳನ್ನು ಗಳಿಸಿ ಮೊದಲ ರ‍್ಯಾಂಕ್ ದಾಖಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಶಂಕರನಾರಾಯಣ ಭಟ್ ಹಾಗೂ ಸುಮಾ ದಂಪತಿ ಪುತ್ರಿ ರಂಜಿತಾ ಎಂ ಬಿಎಸ್ಸಿ ಪಿಎಂಸಿ ವಿಭಾಗದಲ್ಲಿ ಒಟ್ಟು ೫೦೦೦ ಅಂಕಗಳಲ್ಲಿ ೪೮೪೬ ಅಂಕ ದಾಖಲಿಸಿ ದ್ವಿತೀಯ ರ‍್ಯಾಂಕ್ ಗಳಿಸಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂತೆಯೇ ಪುತ್ತೂರಿನ ಕಬಕದ ಬೈಪದವು ನಿವಾಸಿಗಳಾದ ಶ್ರೀಕೃಷ್ಣ ಭಟ್ ಹಾಗೂ ಮಂಗಳಗೌರಿ ಬಿ ದಂಪತಿ ಪುತ್ರಿ ಅನನ್ಯಲಕ್ಷಿ್ಮ ಬಿ.ಕಾಂ ವಿಭಾಗದಲ್ಲಿ ಒಟ್ಟು ೫೦೦೦ ಅಂಕಗಳಲ್ಲಿ ೪೭೨೯ ಅಂಕ ಗಳಿಸುವುದರ ಮೂಲಕ ನಾಲ್ಕನೇ ರ‍್ಯಾಂಕ್ ದಾಖಲಿಸಿದ್ದಾರೆ.

ರ‍್ಯಾಂಕ್ ಬಗೆಗೆ ಸಂತಸ ವ್ಯಕ್ತಪಡಿಸಿರುವ ಕಾಲೇಜಿನ ಪ್ರಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ರ‍್ಯಾಂಕ್‌ಗಳು ನಮ್ಮ ವಿದ್ಯಾರ್ಥಿಗಳ ಉತ್ಕೃಷ್ಟತೆಗೆ ಹಿಡಿದ ಕೈಗನ್ನಡಿ. ಸಂಸ್ಥೆಯಲ್ಲಿ ದೊರಕುತ್ತಿರಯುವ ಗುಣಮಟ್ಟದ ಶಿಕ್ಷಣದಿಂದಾಗಿ ಇಂತಹ ಸಾಧನೆ ಮೆರೆಯುವುದಕ್ಕೆ ವಿದ್ಯಾರ್ಥಿಗಳಿಗೆ ಅನುಕೂಲವೆನಿಸಿದೆ. ಕಾಲೇಜಿಗೆ ಹಲವು ವರ್ಷಗಳಿಂದ ನಿರಂತರವಾಗಿ ರ‍್ಯಾಂಕ್ ಲಭಿಸುತ್ತಿರುವುದು ಹೆಮ್ಮೆಯ ವಿಚಾರ ಎಂದು ನುಡಿದಿದ್ದಾರೆ.

“ವಿವೇಕಾನಂದ ವಿದ್ಯಾಸಂಸ್ಥೆ ಸರ್ವತೋಮುಖ ಶಿಕ್ಷಣಕ್ಕೆ ಹೆಸರಾಗಿದೆ. ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ಕೃಷ್ಟ ವ್ಯಕ್ತಿತ್ವವನ್ನೂ ರೂಪಿಸಿಕೊಳ್ಳಬೇಕೆಂಬ ಹಂಬಲ, ಪ್ರಯತ್ನ ನಮ್ಮದು. ಇದೀಗ ದೊರಕಿರುವ ರ‍್ಯಾಂಕ್ ಗಳು ನಮಗೆ ಹೆಚ್ಚಿನ ಸಂತಸವನ್ನು ನೀಡಿವೆ.”

– ಪಿ.ಶ್ರೀನಿವಾಸ ಪೈ, ಅಧ್ಯಕ್ಷರು, ಆಡಳಿತ ಮಂಡಳಿ