ಕೈಕಾರ ಹಾ.ಉ.ಸ. ಸಂಘಕ್ಕೆ ನೂತನ ಅಧ್ಯಕ್ಷರಾಗಿ ಪ್ರಕಾಶ್ಚಂದ್ರ ರೈ ಕೈಕಾರ: ಉಪಾಧ್ಯಕ್ಷರಾಗಿ ಅಮರ್ನಾಥ್ ರೈ ಅವಿರೋಧ ಆಯ್ಕೆ – ಕಹಳೆ ನ್ಯೂಸ್
ಕೈಕಾರ ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ.
ಒಟ್ಟು ೧೩ ಸ್ಥಾನ ,೧೧ ಸ್ಥಾನಗಳಿಗೆ ನಿರ್ದೇಶಕರಿಗೆ ಅವಿರೋಧ ಆಯ್ಕೆ ಆಗಿದೆ. ಸಂತೋಷ್ ರೈ ಕೈಕಾರ, ವಿಶ್ವನಾಥ್ ಪರನೀರು, ರವಿಕಿರಣ್ ಬಳ್ಳೇರಿ, ಸುಂದರ್ ರೈ ಪನಡ್ಕ, ಶಶಿಕಿರಣ್ ರೈ ಮೊಡಪಾಡಿ, ಭಾರತಿ .ಎಸ್.ರೈ ಕೈಕಾರ, ಗಿರಿಜಾ ದರ್ಕಸ್, ರಘುರಾಮ್ ನಾಯ್ಕ್ ಬಿಜತ್ರೆ, ಗುಣವತಿ ವಿನಾಯಕ ನಗರ ಆಯ್ಕೆಯಾಗಿದ್ದಾರೆ.
ಇಂದು ೨೦೧೯ರ ಸಾಲಿನ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆದಿದ್ದು ನೂತನ ಅಧ್ಯಕ್ಷರಾಗಿ ಪ್ರಕಾಶ್ಚಂದ್ರ ರೈ ಕೈಕಾರ, ಉಪಾಧ್ಯಕ್ಷರಾಗಿ ಅಮರ್ನಾಥ್ ರೈ ಐಂಬಾಗಿಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇನ್ನೂ ನೂತನ ಅಧ್ಯಕ್ಷರಾದ ಪ್ರಕಾಶ್ಚಂದ್ರ ರೈ ಮಾತನಾಡಿ ಮುಮದಿನ ಆಡಳಿತ ಅವಧಿಯಲ್ಲಿ ಕೈಕಾರ ಹಾಲು ಉತ್ಪಾದಕರ ಸಂಘದ ಎಳಿಗೆಗಾಗಿ ಪ್ರಾಮಾಣಿಕ ಶ್ರಮ ವಹಿಸೋದಾಗಿ ಭರವಸೆ ನೀಡಿದರು.
ಚುನಾವಣೆ ನಿರ್ವಾಚನ ಅಧಿಕಾರಿಯಾಗಿ ಶಿವಲಿಂಗ ಚುನಾವಣಾ ಪ್ರಕ್ರಿಯೆ ನಡೆಸಿದ್ರು. ಸಂಘದ ಕಾರ್ಯದರ್ಶಿ ಸಂಜೀವ ರೈ ಐಂಬಾಗಿಲು ಸಹಕರಿಸಿದರು.