ಕಾರ್ಖಾನೆಯ ಶೆಟರ್ ಎಳೆದು 20 ವರ್ಷ ಆಯ್ತು. ಕೆಲಸ ಕಳೆದುಕೊಂಡವರು ನೋವು ಒಂದು ಕಡೆಯಾದರೆ, ಸಕ್ಕರೆ ಬೆಳೆಗಾರರ ಕೂಗು ಇನ್ನೊಂದು ಕಡೆ. ಇವೆಲ್ಲದರ ನಡುವೆ ಮೌನವಾಗಿ ದಿನದೂಡುತ್ತಿದ್ದ ಯಂತ್ರಗಳು ಇಂದು ತುಕ್ಕು ಹಿಡಿದು ನಿಂತಿತ್ತು. ಆದ್ರೆ ಇದೀಗ ಮಹಾನುಭಾವನ ದಯೆಯಿಂದ ತುಕ್ಕು ಹಿಡಿದ ಯಂತ್ರಗಳಿಗೆ ಮರು ಜೀವ ನೀಡಲಾಗುತ್ತಿದೆ.
ಹೌದು ಉಡುಪಿ ಜಿಲ್ಲೆಯ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಒಂದು ಕಾಲದಲ್ಲಿ ಅನೇಕ ಜನರ ಆಶಾ ಗೋಪುರವಾಗಿತ್ತು, ಕಬ್ಬು ಬೆಳೆಗಾರರ ನೆಮ್ಮದಿಯ ಬದುಕಿಗೆ ಕೈಗನ್ನಡಿಯಾಗಿತ್ತು. ಸಹಕಾರಿ ತತ್ವದಲ್ಲಿ ಪ್ರಾರಂಭವಾಗಿ ರಾಜ್ಯದ ಏಕೈಕ ಸಕ್ಕರೆ ಕಾರ್ಖಾನೆ ಎಂಬ ಹೆಗ್ಗಳಿಕೆಯೊಂದಿಗೆ, ಪ್ರತಿಷ್ಠಿತ ಸಕ್ಕರೆ ಕಾರ್ಖಾನೆಗಳಲ್ಲಿ ಒಂದಾಗಿತ್ತು.
ದುರಾದೃಷ್ಟವಶಾತ್ ನಷ್ಟದಿಂದ ಕಾರ್ಖಾನೆ ಲಾಕೌಟ್ ಆಗಿತ್ತು, ಇದರಿಂದಾಗಿ ಎರಡು ದಶಕಗಳಿಂದ ಕರಾವಳಿ ರೈತರು ಕಬ್ಬು ಬೆಳೆಯುದನ್ನೆ ಬಿಟ್ಟರು. ಆದ್ರೆ ಇದೀಗ ರೈತರಲ್ಲಿ ನವಚೈತನ್ಯ ಹುಟ್ಟುವಂತ ಸುದ್ದಿಯನ್ನ ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ.
ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಮತ್ತೆ ಕಾರ್ಯಪ್ರವೃತವಾಗಿಸುದರ ಮೂಲ ಎಥೆನಾಲ್ ಉತ್ಪಾದನೆಗೆ ಹೇರಳ ಸಬ್ಸಿಡಿ ನೀಡಿ ಪ್ರೋತ್ಸಾಹಿಸಲು ನರೇಂದ್ರ ಮೋದಿ ಮುಂದಾಗಿದ್ದಾರೆ.
ಈ ಬೆನ್ನಲ್ಲೇ ಆರು ಸಾವಿರ ರೈತರು ಕಬ್ಬು ಬೆಳೆಯವತ್ತ ಒಲವು ತೋರಿದ್ದಾರೆ. ಕಬ್ಬು ಅರೆಯುವ ಕಾರ್ಖಾನೆಯಲ್ಲಿ ಎಥೆನಾಲ್ ಉತ್ಪಾದಿಸಲು ಉತ್ತಮ ಅವಕಾಶ ಇದೆ. ಹಾಗಾಗಿ ಸರ್ಕಾರದ ನೆರವಿನಿಂದ ಮತ್ತೆ ಸಕ್ಕರೆ ಉತ್ಪಾದನೆಗೆ ಆಡಳಿತ ಮಂಡಳಿ ನಿರ್ಧಾರಿಸಿದೆ.
ಎಥೆನಾಲ್ ಉತ್ಪಾದನೆಗೆ ಕೇಂದ್ರ ಸರ್ಕಾರ ಆಸಕ್ತಿ ತೋರಿಸುತ್ತಿದ್ದು, ಈ ಮೂಲಕ ಮಂಗಳೂರಿನಲ್ಲಿರುವ ಬೃಹತ್ ಕೈಗಾರಿಕೆಗಳಿಗೆ ಇಲ್ಲಿನ ಎಥೆನಾಲ್ ಬಳಸಬಹುದು ಅನ್ನೋ ಚಿಂತನೆಗೆ ಜೀವ ಸಿಕ್ಕಂತಾಗಿದೆ, ಹೀಗಾಗಿ ಪ್ರಧಾನಿ ಮೋದಿ ಕನಸು ನನಸಾಗಿಸಲು ಸಹಕಾರಿಗಳು ಮುಂದಾಗಿದ್ದಾರೆ.
ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ಮತ್ತೆ ಕಬ್ಬು ಅರೆಯಲು ಆರಂಭವಾದರೆ ಅದೊಂದು ಬಹುಪಯೋಗಿ ಯೋಜನೆಯಾಗಿ ಕರಾವಳಿಯ ಆರ್ಥಿಕತೆಗೆ ಅನುಕೂಲವಾಗಲಿದೆ. ಒಟ್ಟಾರೆಯಾಗಿ ಪ್ರಧಾನಿ ನರೇಂದ್ರ ಮೋದಿಯವರ ಒಂದು ಘೋಷಣೆ ಈ ಕಾರ್ಖಾನೆಗೆ ಆಕ್ಸಿಜನ್ ನೀಡಿದಂತಾಗಿದ್ದು, ರೈತರು ಮತ್ತೆ ಕಬ್ಬು ಬೆಳೆಯುವ ಉತ್ಸಾಹ ಇಮ್ಮಡಿಯಗಿದೆ.
ಸುಮಿತ್ರ..ಬಿ ಕಹಳೆನ್ಯೂಸ್ ಪುತ್ತೂರು