Recent Posts

Monday, January 20, 2025
ಸುದ್ದಿ

ಹತ್ತಿ ಉರಿಯಿತು ಐಶ್ವರ್ಯ ರೈ ತಾಯಿ ಮನೆ | ಸ್ಥಳಕ್ಕೆ ಧಾವಿಸಿದ ಐಶ್,ಅಭಿ.

ಮುಂಬಯಿ : ಐಶ್ವರ್ಯಾ ರೈ  ಬಚ್ಚನ್‌ ಮತ್ತು ಅಭಿಷೇಕ್‌ ಬಚ್ಚನ್‌ ವಾಸವಾಗಿರುವ ಇಲ್ಲಿನ ಹದಿನಾರು ಅಂತಸ್ತುಗಳ ಲಾ ಮೇರ್‌ ಅಪಾರ್ಟ್‌ಮೆಂಟಿನ ಹದಿಮೂರನೇ ಮಹಡಿಯಲ್ಲಿ  ನಿನ್ನೆ ಮಂಗಳವಾರ ಬೆಂಕಿ ಕಾಣಿಸಿಕೊಂಡಿತು.

ಪರಿಣಾಮವಾಗಿ ಐಶ್ವರ್ಯಾ ಮತ್ತು ಅಭಿಷೇಕ್‌ ಅವರು ಬಾಂದ್ರಾದಲ್ಲಿನ ಐಶ್ವರ್ಯಾ ಅವರ ತಾಯಿ ಮನೆಗೆ ಸ್ಥಳಾಂತರಗೊಂಡರು.
ಐಶ್ವರ್ಯಾ – ಅಭಿಷೇಕ್‌ ವಾಸವಾಗಿರುವ 16 ಅಂತಸ್ತುಗಳ ಲಾ ಮೇರ್‌ ಅಪಾರ್ಟ್‌ಮೆಂಟಿನ 13ನೇ ಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಕೂಡಲೇ ಅಗ್ನಿಶಾಮಕದಳದವರು ನಂದಿಸುವಲ್ಲಿ ಸಫ‌ಲರಾದರು. ಐಶ್ವರ್ಯಾ ಅವರು ಈ ಅಪಾರ್ಟ್‌ಮೆಂಟಿನಲ್ಲಿ ಮದುವೆಗೆ ಮುನ್ನ ವಾಸಿಸಿಕೊಂಡಿದ್ದರು. ಸಚಿನ್‌ ತೆಂಡುಲ್ಕರ್‌ ಕೂಡ ಈ ಅಪಾರ್ಟ್‌ಮೆಂಟಿನಲ್ಲೇ ವಾಸವಾಗಿದ್ದರು.
ಮುಂಬಯಿಯ ಮುಖ್ಯ ಅಗ್ನಿಶಾಮಕ ದಳದ ಅಧಿಕಾರಿ ಪಿ ಎಸ ರಹಾಂಗ್‌ದಾಳೆ ಮಾಧ್ಯಮದೊಂದಿಗೆ ಮಾತನಾಡುತ್ತಾ, “ಬೆಂಕಿ ಕಾಣಿಸಿಕೊಂಡ ಕೂಡಲೇ ನಮಗೆ ಫೋನ್‌ ಕರೆ ಬಂತು; ಒಡನೆಯೇ ನಾವು ಸ್ಥಳಕ್ಕೆ ಧಾವಿಸಿದೆವು. ಕಟ್ಟಡದಲ್ಲಿ ಅಗ್ನಿ ಶಾಮಕ ವ್ಯವಸ್ಥೆ ಸರಿಯಾದ ಸ್ಥಿತಿಯಲ್ಲಿ ಇರಲಿಲ್ಲ; ಹಾಗಿದ್ದರೂ ನಾವು ಬೆಂಕಿಯನ್ನು ಕೂಡಲೇನಿಯಂತ್ರಿಸಿ ಅದು ಇತರೆಡೆಗೆ ಹರಡುವುದನ್ನು ಯಶಸ್ವಿಯಾಗಿ ತಡೆದೆವು’ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response