Monday, November 25, 2024
ಸುದ್ದಿ

ಉಡುಪಿಯ ಕಾಪು ಕಡಲ ನೀರು ಹಸಿರು ಬಣ್ಣಕ್ಕೆ – ಕಹಳೆ ನ್ಯೂಸ್

ಉಡುಪಿ: ಸಮುದ್ರದ ಬಣ್ಣ ಯಾವುದು ಎಂದರೆ ಬಹುತೇಕ ಎಲ್ಲರೂ ಹೇಳುವುದು ನೀಲಿ. ಆದರೆ ಉಡುಪಿಯ ಕಾಪು ಕಡಲಿನ ನೀರು ಮಾತ್ರ ಮೂರು ದಿನಗಳಿಂದ ಹಸಿರಾಗಿದ್ದು, ಆಶ್ಚರ್ಯದ ಜೊತೆಗೆ ಭಯ ಮೂಡಿಸಿದೆ.

ಹೌದು, ಹಚ್ಚ ಹಸಿರು ಬಣ್ಣಕ್ಕೆ ತಿರುಗಿರುವ ನೀರು ಮೈಗೆ ಸೋಕಿದರೆ ನವೆ ಪ್ರಾರಂಭವಾಗುತ್ತಿದ್ದು, ಮೀನುಗಳು ಕೂಡ ಕಣ್ಮೆರೆಯಾಗಿರುವುದು ಸ್ಥಳೀಯ ಮೀನುಗಾರರನ್ನು ಆತಂಕಕ್ಕೆ ದೂಡುವಂತೆ ಮಾಡಿದೆ. ಹಾಗಾದರೆ ಕಡಲ ನೀರು ಯಾಕೆ ಹಸಿರಾಯ್ತು? ಈ ಬಗ್ಗೆ ಒಂದು ರಿಪೋರ್ಟ್ ಇಲ್ಲಿದೆ.ಸಹಜವಾಗಿ ಸಮುದ್ರ ನೀರಿನ ಬಣ್ಣ ಹಸಿರಾಗಿಯೇ ಇರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೂರು ದಿಗಳಿಂದ ಉಡುಪಿಯ ಕಾಪು ಬೀಚ್ಗೆ ಅಪ್ಪಳಿಸಿರುವ ಅರಬ್ಬಿ ಸಮುದ್ರದ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಸಮುದ್ರದ ನೀರಿಗೆ ಕೆಲವೊಮ್ಮೆ ಹಸಿರು ಬಣ್ಣ ಬರುವುದು ಸಹಜ ಪ್ರಕ್ರಿಯೆ. ಇದು ಪಾಚಿ ಬಿಡುವುದು ಅನ್ನುವುದು ಮೀನುಗಾರರ ಮಾತು. ಆದ್ರೆ ಸಮುದ್ರದ ಒಡಲಾಳದಲ್ಲಿ ಉಂಟಾಗುವ ಡೈನೋಫ್ಲಾರೆಜಿಸ್ಟ್ ಎಂಬ ಜೀವಾಣುವಿನಿಂದ ಉಂಟಾಗುವ ನೈಸರ್ಗಿಕ ರಾಸಾಯನಿಕ ಪ್ರಕ್ರಿಯೆಯಿಂದ ನೀರು ಹಸಿರಾಗುತ್ತೆ ಅನ್ನುತ್ತಾರೆ ಪರಿಸರ ತಜ್ಞರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಮುದ್ರದಲ್ಲಿ ಹೀಗೆ ಹಸಿರು ಬಣ್ಣ ಪಡೆದುಕೊಳ್ಳುವ ನೀರು ಸುಮಾರು ಒಂದು ವಾರದಿಂದ ಮೂರುವಾರ ತನಕ ತನ್ನ ಹಸಿರು ಬಣ್ಣವನ್ನು ಉಳಿಸಿಕೊಳ್ಳುತ್ತದೆ. ನಂತರ ಸಹಜವಾಗಿ ನೀಲಿ ಬಣ್ಣ ಪಡೆಯುತ್ತೆ. ಇದು ತೀರಾ ಅಪಾಯಕಾರಿ ಅಲ್ಲದೇ ಹೋದ್ರು, ಸ್ವಲ್ಪ ಮಟ್ಟಿಗೆ ಹಸಿರು ನೀರು ಕೆಟ್ಟ ಪರಿಣಾಮವುಂಟು ಮಾಡುತ್ತದೆಯಂತೆ.

ಸಹಜ ಪ್ರಕ್ರಿಯೆ ಅಂತಾರೆ ಈ ಭಾಗದ ಹಿರಿಯರು
ಸಮುದ್ರದ ನೀರು ಹಸಿರು ಬಣ್ಣಕ್ಕೆ ತಿರುಗುವುದು ಬೇರೆ ಸಮುದ್ರದಲ್ಲಿ ಸಹಜವಾಗಿದೆ. ಅಮೆರಿಕಾ ಕಡೆಗಿರುವ ಸಮುದ್ರದಲ್ಲಿ ಈ ರೀತಿಯ ಪ್ರಕ್ರಿಯೆ ಸಹಜವಾಗಿ ಬಂದು ಹೋಗುತ್ತಿರುತ್ತೆ. ಆದ್ರೆ ಅರಬ್ಬಿ ಸಮುದ್ರದಲ್ಲಿ ಇದು ಅಪರೂಪ. ಸುಮಾರು ೪೦ ವರುಷಗಳ ಹಿಂದೆ ಈ ಭಾಗದಲ್ಲಿ ಈ ರೀತಿಯಾಗಿರುವುದನ್ನು ಇಲ್ಲಿನ ಹಿರಿಯರು ನೆನಪಿಕೊಳ್ಳುತ್ತಾರೆ.

ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಿಂದಾಗಿ ಗಂಧಕ ಮತ್ತು ರಂಜಕದ ಅಂಶ ಸಮುದ್ರಕ್ಕೆ ಸೇರುತ್ತದೆ. ಸಮುದ್ರದಲ್ಲಿ ಉತ್ಪತ್ತಿಯಾಗುವ ಸೂಕ್ಷ್ಮಾಣು ಜೀವಿಗಳಿಂದ ಉಂಟಾಗುವ ಈ ಬಣ್ಣದ ಬದಲಾವಣೆ ಮೀನಿನ ಸಂತತಿ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಹಸಿರು ನೀರಿನ ರಾಸಾಯನಿಕ ಬದಲಾವಣೆಯಿಂದಾಗಿ ಸಣ್ಣ ಪುಟ್ಟ ಮೀನುಗಳು ಸಾವನ್ನಪ್ಪುತ್ತಿವೆ. ಅಷ್ಟೇ ಅಲ್ಲದೆ ಬರುವ ವರ್ಷ ಮೀನಿನ ಸಂತತಿ ಕೂಡ ಇಳಿಮುಖವಾಗುವ ಜೊತೆಗೆ ಮುಂಬರುವ ವರುಷ ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ.

ಮೀನುಗಾರರ ಅಳಲು ಒಂದುಕಡೆ… ಪ್ರವಾಸಿಗರದ್ದು ಇನ್ನೊಂದು ಕಡೆ…
ಮೀನಿನ ಸಂತತಿ ನಾಶದ ಆತಂಕ ಒಂದು ಕಡೆಯಾದರೆ, ಸದ್ಯ ಮೀನುಗಾರಿಕೆ ಮಾಡುವುದು ಕೂಡ ಕಷ್ಟ ಸಾಧ್ಯ. ಬಲೆ ಬೀಸಿದ್ರೆ ಪಾಚಿಯೇ ಬರುತ್ತೆ ಅನ್ನುವುದು ಮೀನುಗಾರರ ಅಳಲು. ಇನ್ನು ಸಮುದ್ರ ತೀರಕ್ಕೆ ಆಗಮಿಸುವ ಪ್ರವಾಸಿಗರು ಕೂಡ ಹಸಿರು ಬಣ್ಣದ ನೀರಿನಲ್ಲಿ ನೀರಾಟವಾಡುವುದಕ್ಕೆ ಹಿಂಜರಿಯುತ್ತಿದ್ದಾರೆ. ಹಸಿರು ಬಣ್ಣಕ್ಕೆ ತಿರುಗಿದ ನೀರಿನಲ್ಲಿ ಸ್ನಾನ ಮಾಡಿದ್ರೆ ತುರಿಕೆ ಹಾಗೂ ಉಸಿರಾಟ ಸಮಸ್ಯೆ ಬರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.