ಸ್ವಚ್ಛಮಂಗಳೂರು 4ನೇ ಹಂತದ ಸ್ವಚ್ಛತಾ ಅಭಿಯಾನಕ್ಕೆ ನವೆಂಬರ್ ನಲ್ಲಿ ಚಾಲನೆ | ಸ್ವಚ್ಛ ಭಾರತ ಯೋಜನೆ ಸಹಕಾರಕ್ಕೆ ರಾಮಕೃಷ್ಣ ಮಿಷನ್ ನಿಂದ ವಿನೂತನ ಕಾರ್ಯಕ್ರಮ.
ಮಂಗಳೂರು: ಪ್ರಧಾನಿಯವರ ಕನಸಿನ ಯೋಜನೆ ಸ್ವಚ್ಛ ಭಾರತ ಅಭಿಯಾನವನ್ನು ಕೇಂದ್ರ ಸರಕಾರದ ವಿಶೇಷ ವಿನಂತಿಯ ಮೇರೆಗೆ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ ಎಂಬ ಹೆಸರಿನಲ್ಲಿ “ಸ್ವಚ್ಛತೆಯೇ ದೇವರು” ಎಂಬ ನೆಲೆಗಟ್ಟಿನಲ್ಲಿ ಆಯೋಜಿಸಿಕೊಂಡು ಬರುತ್ತಲಿದೆ. ಕಳೆದ ಎರಡೂವರೆ ವರುಷಗಳಿಂದ ಮಂಗಳೂರಿನಲ್ಲಿ ಉತ್ತಮ ಜನಸ್ಪಂದನೆ ದೊರೆತಿದೆ. ಜನರಿಂದ ಜನರಿಗಾಗಿ ಜನರೇ ಮಾಡುವ ಕಾರ್ಯಕ್ರಮ ಎಂಬ ಭಾವಜಾಗೃತವಾದುದರ ಪರಿಣಾಮ ಇಂದು ಯಶಸ್ವಿಯಾಗಿ ನಾಲ್ಕನೇ ಹಂತಕ್ಕೆ ಮುನ್ನಡಿಯಿಡುತ್ತಿದೆ. ನಾಲ್ಕನೇ ಹಂತ ನವೆಂಬರ್ 3, 4 ಹಾಗೂ 5ರಂದು ಆರಂಭಗೊಳ್ಳಲಿದೆ. ಕಳೆದ ವರ್ಷದ ಅಭಿಯಾನಕ್ಕಿಂತ ಒಂದಿಷ್ಟು ಬದಲಾವಣೆಗಳೊಂದಿಗೆ ಈ ವರ್ಷದ ಕಾರ್ಯಕ್ರಮಗಳನ್ನು ಯೋಚಿಸಲಾಗುತ್ತಿದೆ. ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ನಾಲ್ಕನೇ ಹಂತದಲ್ಲಿ ನಾಲ್ಕು ಆಯಾಮಗಳಲ್ಲಿ ಅಭಿಯಾನವನ್ನು ಸಂಘಟಿಸಲಾಗುತ್ತಿದೆ.
ಮಂಗಳೂರು: ಪ್ರಧಾನಿಯವರ ಕನಸಿನ ಯೋಜನೆ ಸ್ವಚ್ಛ ಭಾರತ ಅಭಿಯಾನವನ್ನು ಕೇಂದ್ರ ಸರಕಾರದ ವಿಶೇಷ ವಿನಂತಿಯ ಮೇರೆಗೆ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ ಎಂಬ ಹೆಸರಿನಲ್ಲಿ “ಸ್ವಚ್ಛತೆಯೇ ದೇವರು” ಎಂಬ ನೆಲೆಗಟ್ಟಿನಲ್ಲಿ ಆಯೋಜಿಸಿಕೊಂಡು ಬರುತ್ತಲಿದೆ. ಕಳೆದ ಎರಡೂವರೆ ವರುಷಗಳಿಂದ ಮಂಗಳೂರಿನಲ್ಲಿ ಉತ್ತಮ ಜನಸ್ಪಂದನೆ ದೊರೆತಿದೆ. ಜನರಿಂದ ಜನರಿಗಾಗಿ ಜನರೇ ಮಾಡುವ ಕಾರ್ಯಕ್ರಮ ಎಂಬ ಭಾವಜಾಗೃತವಾದುದರ ಪರಿಣಾಮ ಇಂದು ಯಶಸ್ವಿಯಾಗಿ ನಾಲ್ಕನೇ ಹಂತಕ್ಕೆ ಮುನ್ನಡಿಯಿಡುತ್ತಿದೆ. ನಾಲ್ಕನೇ ಹಂತ ನವೆಂಬರ್ 3, 4 ಹಾಗೂ 5ರಂದು ಆರಂಭಗೊಳ್ಳಲಿದೆ. ಕಳೆದ ವರ್ಷದ ಅಭಿಯಾನಕ್ಕಿಂತ ಒಂದಿಷ್ಟು ಬದಲಾವಣೆಗಳೊಂದಿಗೆ ಈ ವರ್ಷದ ಕಾರ್ಯಕ್ರಮಗಳನ್ನು ಯೋಚಿಸಲಾಗುತ್ತಿದೆ. ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ನಾಲ್ಕನೇ ಹಂತದಲ್ಲಿ ನಾಲ್ಕು ಆಯಾಮಗಳಲ್ಲಿ ಅಭಿಯಾನವನ್ನು ಸಂಘಟಿಸಲಾಗುತ್ತಿದೆ.
ಸ್ವಚ್ಛ ಮಂಗಳೂರು – ನಿತ್ಯ ಜಾಗೃತಿ : ಕಸಹೆಕ್ಕುವ ಕಾರ್ಯದೊಂದಿಗೆ ಜಾಗೃತಿ ಕಾರ್ಯವೂ ಆಗಬೇಕೆಂಬ ಹಿನ್ನಲೆಯಲ್ಲಿ ಈ ಬಾರಿ ಮಂಗಳೂರು ನಗರದ ಸುಮಾರು ಐವತ್ತು ಸಾವಿರ ಮನೆಗಳನ್ನು ಸಂಪರ್ಕಿಸಬೇಕೆಂಬ ಗುರಿ ಹೊಂದಲಾಗಿದೆ. ಈ ಜಾಗೃತಿ ಅಭಿಯಾನವು ಪ್ರತಿದಿನವೂ ಸಾಯಂಕಾಲ ಐದು ಗಂಟೆಯಿಂದ ಏಳು ಗಂಟೆಯತನಕ ನಡೆಯಲಿದೆ. ಇದಕ್ಕಾಗಿ ಸುಮಾರು ಅರವತ್ತು ತಂಡಗಳನ್ನು ಗುರುತಿಸಲಾಗಿದೆ. ಮನೆಮನೆ ಭೇಟಿ ನೀಡಿ ಸ್ವಚ್ಛತೆಯ ಅರಿವು ಮೂಡಿಸುವ ಕರಪತ್ರ ನೀಡುವುದು, ತ್ಯಾಜ್ಯ ನಿರ್ವಹಣೆಯ ಕುರಿತು ತರಬೇತಿ ನೀಡುವುದು, ಪುಟ್ಟ ಸಭೆಗಳನ್ನು ಆಯೋಜಿಸಿ ಸ್ವಚ್ಛತೆಯಲ್ಲಿ ಸಾರ್ವಜನಿಕರು ಕೈಜೋಡಿಸುವಂತೆ ವಿನಂತಿಸುವುದು, ಸಮುದಾಯದ ಅಭಿವೃದ್ಧಿ ಕಾರ್ಯದಲ್ಲಿ ಗುರಿತಿಸಿಕೊಳ್ಳುವಂತೆ ಪ್ರೇರೇಪಿಸುವುದು ಸೇರಿದಂತೆ ಸುಮಾರು ಇಪ್ಪತ್ತು ಆಂಶಗಳ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗುವುದು.
ಸ್ವಚ್ಛಭಾರತ – ಶ್ರಮದಾನ : ಪ್ರತಿ ಭಾನುವಾರ ಬೆಳಿಗ್ಗೆ 7 ಗಂಟೆಯಿಂದ 10 ಗಂಟೆಯತನಕ ಸುಮಾರು 40 ವಾರಗಳ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನ ನಡೆಯಲಿದೆ. ಸುಮಾರು 100 ರಿಂದ 200 ಜನ ಸ್ವಯಂ ಸೇವಕರು ಶ್ರಮದಾನ ಮಾಡಲಿದ್ದಾರೆ. ಪೆÇರಕೆ ಹಿಡಿದು ರಸ್ತೆ ಸ್ವಚ್ಛ ಮಾಡುವುದರ ಜೊತೆ ಜೊತೆಗೆ ತೋಡುಗಳನ್ನು ಶುಚಿಗೊಳಿಸುವುದು, ಜಾಗೃತಿ ಕರಪತ್ರ ಹಂಚುವುದು, ಸಾರ್ವಜನಿಕ ಶೌಚಾಲಯದ ಸ್ವಚ್ಛತೆ, ಅವಶ್ಯವಿದ್ದೆಡೆ ಮಾರ್ಗಸೂಚಕ ನಾಮಫಲಕಗಳ ಅಳವಡಿಕೆ ಮತ್ತು ನವೀಕರಣ, ಬಸ್ ತಂಗುದಾಣಗಳಿಗೆ ಬಣ್ಣ ಬಳಿಯುವುದು, ನವೀಕರಣ, ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಲಾದ ಅನಧಿಕೃತ ಪೋಸ್ಟರ್ ಬ್ಯಾನರ್ ಗಳನ್ನು ತೆರವುಗೊಳಿಸುವುದೇ ಮೊದಲಾದ ಜನೋಪಯೋಗಿ ಕಾರ್ಯಗಳನ್ನು ಮಾಡಲಾಗುವುದು.
ಸ್ವಚ್ಛ ಮನಸ್ಸು : ಇಂದಿನ ಮಕ್ಕಳು ನಾಳೆಯ ಪ್ರಜೆಗಳು ಎಂಬ ಹಿನ್ನಲೆಯಲ್ಲಿ ಶಾಲಾವಿದ್ಯಾರ್ಥಿಗಳಲ್ಲಿ ಸ್ವಚ್ಛತೆಯ ಕುರಿತಂತೆ ಅರಿವು ಮೂಡಿಸಬೇಕೆಂಬ ಆಶಯದೊಂದಿಗೆ ಸುಮಾರು ನೂರು ಶಾಲೆಗಳಲ್ಲಿ ಒಟ್ಟು ಐನೂರು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಪ್ರತಿ ಶಾಲೆಯಿಂದ ನೂರು ಮಕ್ಕಳಿಗೆ ಶುಚಿತ್ವದ ಕುರಿತು ವಿಶೇಷ ತರಬೇತಿ ನೀಡಲಾಗುವುದು. ಅದರಲ್ಲಿ ಮೊದಲ ಐದು ವಿದ್ಯಾರ್ಥಿಗಳನ್ನು ಸ್ವಚ್ಛ ಭಾರತ ಅಂಬಾಸಡರ್ ಎಂದು ಗುರುತಿಸಿ ಗೌರವಿಸಿ ಸಮ್ಮಾನಿಸಲಾಗುವುದು. ಜೊತೆಗೆ ರಾಷ್ಟ್ರ ನಿರ್ಮಾಣದಲ್ಲಿ ಅವರು ಪಾತ್ರವಹಿಸುವಂತೆ ಪ್ರೇರೇಪಿಸುವ ಕಾರ್ಯಾಗಾರಗಳನ್ನು ಹಮ್ಮಿಕೊಂಡು ವಿಶೇಷವಾಗಿ ತರಬೇತುಗೊಳಿಸಲಾಗುವುದು. ಇದರ ಪೂರ್ಣಪ್ರಮಾಣದ ಅನುಷ್ಟಾನಕ್ಕಾಗಿ ನಿತ್ಯಕಾರ್ಯ ನಿರ್ವಹಿಸುವ ನುರಿತ ತರಬೇತುದಾರರು ಕೈ ಜೋಡಿಸಲಿದ್ದಾರೆ. ಇದು ಜಾಗೃತಿ ಕಾರ್ಯಕ್ರಮವಾದರೂ ಒಂದಿಷ್ಟು ಶ್ರಮದಾನ, ಚಟುವಟಿಕೆಗಳನ್ನು ಒಳಗೊಂಡಿರುತ್ತದೆ.
ಸ್ವಚ್ಛ ಗ್ರಾಮ: ಸ್ವಚ್ಛ ದಕ್ಷಿಣಕನ್ನಡ: ಮೂರು ಹಂತಗಳಲ್ಲಿ ಕೇವಲ ಮಂಗಳೂರು ನಗರವನ್ನು ಕೇಂದ್ರೀಕರಿಸಿ ಅಭಿಯಾನವನ್ನು ಆಯೋಜಿಸಲಾಗಿತ್ತು. ಆದರೆ ಈ ಬಾರಿ ದಕ್ಷಿಣಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿಯೂ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಲು ಯೋಜಿಸಲಾಗುತ್ತಿದೆ. ಜಿಲ್ಲೆಯ ಸುಮಾರು ನೂರು ಗ್ರಾಮಗಳಲ್ಲಿ ಒಂದುಸಾವಿರ ಸ್ವಚ್ಛತಾ ಕಾರ್ಯಕ್ರಮಗಳನ್ನು ಮಾಡುವ ಗುರಿ ಹೊಂದಲಾಗಿದೆ. ದಕ ಜಿಲ್ಲಾ ಪಂಚಾಯತ್ ಸಹಭಾಗಿತ್ವದಲ್ಲಿ ಸ್ವಚ್ಛಗ್ರಾಮ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು. ಗ್ರಾಮಗಳಲ್ಲಿ ಸುಮಾರು ನೂರು ಜನರನ್ನು ಸದಸ್ಯರನ್ನಾಗಿ ಮಾಡಿಕೊಳ್ಳಲಾಗುವುದು. ಸದಸ್ಯರಲ್ಲಿ ಒಬ್ಬರನ್ನು ಸಂಯೋಜಕರೆಂದು ನೇಮಕ ಮಾಡಲಾಗುವುದು. ಸದಸ್ಯರರಿಗೆ ಟೀಶರ್ಟ್ ಗ್ಲೌಸ್ ಸೇರಿದಂತೆ ಸ್ವಚ್ಛತೆಗೆ ಬೇಕಾದ ಉಪಕರಣಗಳನ್ನು ನೀಡಲಾಗುವುದು. ತಿಂಗಳಿಗೆ ಒಂದು ಭಾನುವಾರ ಸದಸ್ಯರೆಲ್ಲ ಸೇರಿ ಅವರ ಗ್ರಾಮದಲ್ಲಿ ಶ್ರಮದಾನ ಕೈಗೊಳ್ಳುತ್ತಾರೆ. ಗ್ರಾಮವೊಂದರಲ್ಲಿ ವರ್ಷದಲ್ಲಿ ಒಟ್ಟು ಹತ್ತು ಕಾರ್ಯಕ್ರಮಗಳ ಗುರಿಯನ್ನು ನೀಡಲಾಗಿದೆ.
ಈ ನಾಲ್ಕೂ ಯೋಜನೆಗಳಿಗೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದೆ. ಅಭಿಯಾನದ ನಾಲ್ಕನೇ ಹಂತದ ಯೋಜನೆಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿದ್ಧತೆಗಳು ಭರದಿಂದ ಸಾಗಿವೆ.
4 ಹಂತದ ಕಾರ್ಯಕ್ರಮಗಳಿಗೆ ಚಾಲನೆ
3 ನವೆಂಬರ್ 2017 ಶುಕ್ರವಾರದಂದು ಬೆಳಿಗ್ಗೆ 10 ಗಂಟೆಗೆ ಸ್ವಚ್ಛ ದಕ್ಷಿಣಕನ್ನಡ ಅಭಿಯಾನಕ್ಕೆ ಮಠದ ಆವರಣದಲ್ಲಿ ಚಾಲನೆ ದೊರೆಯಲಿದೆ. ಕೇಂದ್ರ ಸಚಿವರಾದ ರಮೆಶ್‍ಜಿಗಜಿಣಗಿ ಮುಖ್ಯ ಅಭ್ಯಾಗತರಾಗಿ ಆಗಮಿಸಿ ಸ್ವಚ್ಛ ದಕ್ಷಿಣಕನ್ನಡ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ವಿಶೇಷ ಅತಿಥಿಯಾಗಿ ಡಿ ಆರ್ ಪಾಟೀಲ್ ಪೂರ್ವ ಶಾಸಕರು, ಗದಗ್ ಇವರು ಆಗಮಿಸಲಿದ್ದಾರೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಎಂ ಆರ್‍ರವಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸ್ವಾಮಿ ಜಿತಕಾಮಾನಂದಜಿ ಮಹರಾಜ್ ಸಾನಿಧ್ಯ ವಹಿಸಲಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ವಿವಿಧ ಗ್ರಾಮಗಳಿಂದ ಸುಮಾರು 1000 ಜನ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದೆ.
4 ನವೆಂಬರ್ 2017 ಶನಿವಾರದಂದು ಬೆಳಿಗ್ಗೆ 9:30 ಕ್ಕೆ ಸ್ವಚ್ಛ ಮನಸ್ಸು ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ರಾಮಕೃಷ್ಣ ಮಿಶನ್ನಿನ ಟ್ರಸ್ಟಿಗಳು ಹಾಗೂ ಕೋಲ್ಕತ್ತ ಅದೈತ ಆಶ್ರಮದ ಅಧ್ಯಕ್ಷರಾದ ಪೂಜ್ಯ ಸಾಮಿ ಮುಕ್ತಿದಾನಂದಜಿ ಮಹರಾಜ್ ಚಾಲನೆ ನೀಡಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ರಾಜಕೋಟ್ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಸರ್ವಸ್ಥಾನಂದಜಿ ಆಗಮಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಬೆಂಗಳೂರಿನಿಂದ ಪೆÇ್ರೀ. ರಘೋತ್ತಮ್ ರಾವ್ ಭಾಗವಹಿಸಲಿದ್ದಾರೆ. ಸ್ವಾಮಿಜಿತಕಾಮಾನಂದಜಿ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿರುವುದು. ಅಂದು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ಸ್ವಚ್ಛ ಮನಸ್ಸು ಕಾರ್ಯಾಗಾರ ಜರುಗಲಿದೆ.
5 ನವೆಂಬರ್ 2017 ಭಾನುವಾರದಂದು ಬೆಳಿಗ್ಗೆ 9 ಗಂಟೆಗೆ ಸ್ವಚ್ಛ ಮಂಗಳೂರು ಅಭಿಯಾನ ಉದ್ಘಾಟನೆಗೊಳ್ಳಲಿದೆ. ಕೇಂದ್ರ ಸಚಿವರಾದ ಅನಂತಕುಮಾರ್ ಹೆಗ್ಡೆ ಅಭಿಯಾನಕ್ಕೆ ಚಾಲನೆ ಕೊಡಲಿದ್ದಾರೆ. ಸಂಸದರಾದ ನಳಿನಕುಮಾರ್ ಕಟೀಲು ಮುಖ್ಯ ಅಭ್ಯಾಗತರಾಗಿರುತ್ತಾರೆ. ರಾಮಕೃಷ್ಣ ಮಿಶನ್ನಿನ ಟ್ರಸ್ಟಿಗಳಾದ ಸ್ವಾಮಿ ಮುಕ್ತಿದಾನಂದಜಿಮಹರಾಜ್ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಎಮ್‍ಆರ್ ಪಿ ಎಲ್ ವ್ಯವಸ್ಥಾಪಕ ನಿರ್ದೇಶಕರಾದ ಎಚ್‍ಕುಮಾರ್‍ಹಾಗೂ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿಡಾ. ಎನ್ ವಿನಯ ಹೆಗ್ಡೆ ವಿಶೇಷ ಆಹ್ವಾನಿತರಾಗಿ ಭಾಗವಹಿಸುವ ನೀರೀಕ್ಷೆಯಿದೆ. ಅಭಿಯಾನದ ಮಾರ್ಗದರ್ಶಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉಪಸ್ಥಿತರಿರುತ್ತಾರೆ.