Friday, September 20, 2024
ಸುದ್ದಿ

ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಗೆ ಚಪ್ಪಲಿಯಿಂದ ಹೊಡೆದ ವಿದ್ಯಾರ್ಥಿನಿ ಅಮಾನತು..! – ಕಹಳೆ ನ್ಯೂಸ್

ಗೋರಖ್‍ಪುರ : ಲೈಂಗಿಕ ಕಿರುಕುಳ ನೀಡಲು ಮುಂದಾದ ವ್ಯಕ್ತಿಗೆ ಸಾರ್ವಜನಿಕವಾಗಿ ಹೊಡೆದು ಆತನನ್ನು ಬಂಧಿಸಲು ಕಾರಣವಾಗಿದ್ದ 11ನೇ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ಶನಿವಾರ ಆಕೆಯ ಶಾಲೆ ಅಮಾನತು ಮಾಡಿದೆ. ಶಿಸ್ತುಕ್ರಮದ ಅಂಗವಾಗಿ ವಿದ್ಯಾರ್ಥಿನಿಯನ್ನು ಅಮಾನತು ಮಾಡಲಾಗಿದೆ.
25 ವರ್ಷದ ವ್ಯಕ್ತಿಯೊಬ್ಬ, ಈ ವಿದ್ಯಾರ್ಥಿನಿ ಶಾಲೆಯಿಂದ ವಾಪಸ್ಸಾಗುತ್ತಿದ್ದಾಗ ಅಡ್ಡಗಟ್ಟಿದ್ದ. ಆಗ ವಿದ್ಯಾರ್ಥಿನಿ ಆತನಿಗೆ ಚಪ್ಪಲಿಯಿಂದ ಹೊಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಳು. ಐಪಿಸಿ ಸೆಕ್ಷನ್ ಅನ್ವಯ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿತ್ತು.
ಶನಿವಾರ ವಿದ್ಯಾರ್ಥಿನಿ ಶಾಲೆಗೆ ಬಂದಾಗ ಪ್ರಾಚಾರ್ಯರು ಆಕೆಯನ್ನು ಕರೆಸಿ, ಶಾಲೆಯ ಘನತೆಗೆ ಧಕ್ಕೆ ತಂದ ಕಾರಣಕ್ಕಾಗಿ ವಜಾ ಮಾಡುತ್ತಿರುವುದಾಗಿ ತಿಳಿಸಿ, ವರ್ಗಾವಣೆ ಪ್ರಮಾಣಪತ್ರ (ಟಿಸಿ) ಪಡೆಯುವಂತೆ ಸೂಚಿಸಿದರು. “ಸಣ್ಣ ಘಟನೆಯನ್ನ ಅನಗತ್ಯವಾಗಿ ದೊಡ್ಡದು ಮಾಡಿದ್ದಾಗಿ ಪ್ರಾಚಾರ್ಯರು ಹೇಳಿದ್ದಾರೆ” ಎಂದು ವಿದ್ಯಾರ್ಥಿನಿ ವಿವರಿಸಿದ್ದಾಳೆ.
“ತರಗತಿ ಮುಗಿಯುವ ಮೊದಲು ಆಕೆ ಶಾಲೆಯಿಂದ ಹೋಗಿದ್ದಾಳೆ. ಇಂಥ ಅಶಿಸ್ತು ಇತರರಿಗೆ ನಿಯಮಾವಳಿ ಉಲ್ಲಂಘಿಸಲು ಅವಕಾಶ ಮಾಡಿಕೊಡುತ್ತದೆ. ಆದ್ದರಿಂದ ಶಿಸ್ತು ಕ್ರಮ ಕೈಗೊಳ್ಳಲಾಗಿದೆ” ಎಂದು ಪ್ರಾಚಾರ್ಯರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು

ಜಾಹೀರಾತು