Saturday, November 23, 2024
ಸುದ್ದಿ

ಕಣ್ಣೂರಿನಲ್ಲಿ ಇಬ್ಬರು ಭಯೋತ್ಪದಕರ ಸೆರೆ | ಇಸ್ಲಾಮಿಕ್ ಸ್ಟೇಟ್ ಗೆ ಸೇರಿದ ಉಗ್ರರು.

ಕಣ್ಣೂರು: ಇಬ್ಬರು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರನ್ನು ತಲಶೇರಿ ಪೊಲೀಸರು ಬಂಧಿಸಿದ್ದಾರೆ. ತಲಶೇರಿ ನಿವಾಸಿಗಳಾದ ಹಂಸ(55), ಮನಾಫ್ (26) ಬಂಧಿತ ಆರೋಪಿಗಳು. ಇದರೊಂದಿಗೆ ಕಳೆದ ಎರಡು ದಿನಗಳಲ್ಲಿ ತಲಶೇರಿ ಪೊಲೀಸರು ಬಂಧಿಸಿದ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರ ಸಂಖೈ 5ಕ್ಕೇರಿದರೆ. ಅಬ್ದುಲ್ ರಸಾಕ್, ಮಿಥಿಲಾಜ್, ರಶೀದ್ ಎಂಬಿವರನ್ನು ಬುಧವಾರ ಬಂಧಿಸಲಾಗಿತ್ತು.

ಬಂಧಿತರಲ್ಲಿ ಹಂಸ ಕಣ್ಣೂರು, ಕಾಸರಗೋಡು ಜಿಲ್ಲೆಗಳಿಂದ ಹಲವರನ್ನು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದನೆಗೆ ಕಳುಹಿಸಿದ ಏಜಂಟ್ ಎಂದು ತಿಳಿದು ಬಂದಿದೆ. ಈಗ ಬಂಧಿತರಾದವರು ತುರ್ಕಿಯಲ್ಲಿ ಭಯೋತ್ಪಾದನೆ ಚಟುವಟಿಕೆಯಲ್ಲಿ ನಿರತರಾಗಿದ್ದರು. ಸಿರಿಯಾ ಗಡಿಯಲ್ಲಿ ಯುದ್ದ ಆರಂಭವಾದೊಡನೆ ಇವರು ಪಲಾಯನಗೈದು ಊರಿಗೆ ಬಂದಿದ್ದರು. ಇವರ ಚಲನವಲನಗಳನ್ನು ಗಮನಿಸುತ್ತಿದ್ದ ಪೊಲೀಸರು ಊರಿನಲ್ಲಿ ಭಯೋತ್ಪಾದನಾ ಚಟುವಟಿಕೆ ಆರಂಭಿಸುತ್ತಿದ್ದಂತೆಯೇ ಬಂಧಿಸಿದ್ದಾರೆ. ಬಂಧಿತರು ಈ ಹಿಂದೆ ಸಿಪಿಎಂ ಪಾಳಯದಲ್ಲಿದ್ದು ಇಧಿಗ ಸಕ್ರಿಯ ಎಸ್.ಡಿ,ಪಿ.ಐ ಕಾರ್ಯಕರ್ತರಾಗಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಧನ ನಡೆಯಲಿದೆಯೆಂದು ಪೊಲೀಸ್ ಮೂಲಗಳು ತಿಳಿಸಿವೆ. ಜಿಹಾದಿ ಹಾಗೂ ಕೆಂಪು ಭಯೋತ್ಪಾದನೆಯ ವಿರುದ್ದ ಬಿಜೆಪಿ ಆಶ್ರಯದಲ್ಲಿ ಕುಮ್ಮನಂ ರಾಜಶೇಖರನ್ ನಡೆಸಿದ ಜನ ರಕ್ಷಾ ಯಾತ್ರೆಯ ಸಮಾರೋಪದ ಬೆನ್ನಲ್ಲೇ ರಾಜ್ಯದಲ್ಲಿ ಜಿಹಾದಿಗಳನ್ನು ಬಂಧಿಸಿರುವುದು ಪಕ್ಷದ ನಿಲುವಿಗೆ ಲಭಿಸಿದ ಅಂಗೀಕಾರವೆಂದು ನೇತಾರರು ಹೇಳುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response