ಮಹಿಳೆಯೊಬ್ಬರು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಬೈಕ್ ಮೇಲೆ ಬಂದ ಖದೀಮರು ಚಿನ್ನಾಭರಣ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಶಹರದ ಶಕ್ತಿನಗರ ಯಲ್ಲಮ್ಮಾ ಹೌಸಿಂಗ್ ಸೋಸೈಟಿ ೧ನೇ ಕ್ರಾಸ್ ಬಳಿ ನಡೆದಿದೆ.
ಶಾಂಭವಿ ಕಾಲೋನಿ ಗಾಂಧಿನಗರ ನಿವಾಸಿ ನಳಿನಿ ರಾಘವೇಂದ್ರ ಪಾಟೀಲ ತಮ್ಮ ಪತಿ ಹಾಗೂ ತಮ್ಮನ ಮಗಳೊಂದಿಗೆ ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಈ ಘಟನೆ ನಡೆದಿದೆ.
ಅಪರಿಚಿತರಿಬ್ಬರು ಪಲ್ಸರ್ ಬೈಕ್ ಮೇಲೆ ಎದುರಿನಿಂದ ಬಂದು ನಳಿನಿಯವರ ಕೊರಳಿಗೆ ಕೈಹಾಕಿ ೪೫ ಗ್ರಾಂ. ತೂಕದ ಚಿನ್ನದ ಮಂಗಳಸೂತ್ರವನ್ನು ಕಿತ್ತುಕೊಂಡಿದ್ದಾರೆ.
ಕೂಡಲೇ ನಳಿನಿ ಇವರು ಸರವನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಿದ್ದಂತೆ ೨೫ ಗ್ರಾಂದಷ್ಟು ಮಂಗಳಸೂತ್ರವನ್ನು ಮಾತ್ರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.