Recent Posts

Sunday, January 19, 2025
ಸುದ್ದಿ

ಟಿಪ್ಪು ಸುಲ್ತಾನ್ ಮುಸ್ಲಿಂ ಮೂಲಭೂತವಾದಿ ಭಯೋತ್ಪದಾಕ | ಹಿಂದೂಗಳು ಮಾತ್ರವಲ್ಲ, ಕ್ರೈಸ್ತರ ಮೇಲೂ ಟಿಪ್ಪು ದೌರ್ಜನ್ಯ – ಬ್ರಿಜೇಶ್ ಚೌಟ ಕಿಡಿ.

ಮಂಗಳೂರು : ರಾಜ್ಯ ಸರಕಾರದ ಟಿಪ್ಪು ಜಯಂತಿ ತೀವ್ರ ವಿರುದ್ಧಕ್ಕೆ ಕಾರಣವಾದ ಬೆನ್ನಲ್ಲೆ ನಿನ್ನೆ ನಡೆದ ರಾಷ್ಟ್ರಪತಿಗಳ ಭಾಷಣವೂ ಬಿ.ಜೆ.ಪಿ. ಕೆಂಗಣ್ಣಿಗೆ ಗುರಿಯಾಗಿದೆ. ರಾಷ್ಟ್ರಪತಿಗಳನ್ನು ಸರಕಾರ ದಾರಿ ತಪ್ಪಿಸಿದೆ ಎಂದು ಬಿ.ಜೆ.ಪಿ. ಆರೋಪಿಸಿದೆ. 

ಮಂಗಳೂರಿನಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಬಿ.ಜೆ.ಪಿ. ಮುಖಂಡ ಬ್ರಿಜೇಶ್ ಚೌಟ ಕೆಂಡಾಮಂಡಲವಾಗಿದ್ದಾರೆ. ಟಿಪ್ಪುವಿಗೆ ಕೇವಲ ಹಿಂದೂಗಳು ಮಾತ್ರವೇ ಟಾರ್ಗೆಟ್ ಅಲ್ಲ, ಬದಲಿಗೆ ಮಂಗಳೂರಿನ ಕರಾವಳಿ ಭಾಗದಲ್ಲಿ ಆಗ ಇದ್ದ 27 ಚರ್ಚ್ ಗಳಲ್ಲಿ 25 ಚರ್ಚ್ ಗಳನ್ನೂ ನೆಲಸಮ ಮಾಡಿದ್ದು ಟಿಪ್ಪು. ಮಂಗಳೂರಿನ ಬಾವುಟಗುಡ್ಡೆ ಮಸೀದಿ, ಸಂತ ಅಲೋಷಿಯನ್ ಕಾಲೇಜಿನ ಎದುರಿನ ಮಸೀದಿಗಳು ಟಿಪ್ಪು ಚರ್ಚ್ ಒಡೆದು ಕಟ್ಟಿದ್ದು, ಬಂಟ್ವಾಳ ತಾಲ್ಲೂಕಿನ ಸಾವಿರಾರು ಕ್ರೈಸ್ತರ ಕಾರಣ ಹೋಮಕ್ಕೆ ಕಾರಣವಾದ ಊರನ್ನು ” ನೆತ್ತರ ಕೆರೆ ” ಎಂದೇ ಈಗಲೂ ಕರೆಯುತ್ತಾರೆ ಇಂತಹ ಮುಸ್ಲಿಂ ಮೂತಭೂತವಾದಿ ಭಯೋತ್ಪದಕನ ಜಯಂತಿಯನ್ನು ಆಚರಿಸಲು ಅದೇ ಕ್ರೈಸ್ತ ಮುಖಂಡರು ಹೊರಟಿರುವುದು ದುರದೃಷ್ಟಕರ ಐವಾಸ್ ಮತ್ತು ಲೋಬೋ ಮೊದಲು ತಮ್ಮವರ ಮೇಲಾದ ಅನ್ಯಾಯಕ್ಕೆ ನ್ಯಾಯದೊರಕಿಸುವ ಪ್ರಯತ್ನ ಮಾಡಲಿ ಎಂದು ಕಿಡಿಕಾರಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response