ಕಳೆದ 800 ವರ್ಷಗಳಿಂದ ವಿಶ್ವವಿಖ್ಯಾತ ಧಾರ್ಮಿಕ ಕ್ಷೇತ್ರ ಶಬರಿ ಮಲೆಯಲ್ಲಿ ನಡೆದುಕೊಂಡು ಬರುತ್ತಿದ್ದ ನಿರ್ದಿಷ್ಟ ವಯೋಮಾನದ ಸ್ತ್ರೀ ಪ್ರವೇಶ ನಿಷೇಧವನ್ನು ಕೋರ್ಟು ತೀರ್ಪು ನೆಪದಲ್ಲಿ ಬಲಾತ್ಕಾರವಾಗಿ ಉಲ್ಲಂಘಿಸಿದ ಕೇರಳದ ಪಿಣರಾಯಿ ವಿಜಯನ್ ನೇತೃತ್ವದ ಕಮ್ಯುನಿಸ್ಟ್ ಸರಕಾರದ ದಾಳಿಯನ್ನ ಹಿಂದೂ ಜಾಗರಣ ವೇದಿಕೆ ಅತ್ಯಂತ ಉಗ್ರವಾಘಿ ಖಂಡಿಸಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಚುನಾಯಿತವಾಗಿ ಸರಕಾರ ಅದೇ ಜನರ ಭಾವನೆಗಳ ಮೇಲೆ ಚೆಲ್ಲಾಟ ಆಡಿದೆ. ಹಿಂದೂ ಸಮಾಜದಲ್ಲಿ ಋತುಮತಿಗೆ ದೇವಸ್ಥಾನ ನಿಷೇದ ಶತಮಾನಗಳಿಮದ ನಡದುಕೊಂಡು ಬಂದ ನಿಯಮ. ದೇವಸ್ಥಾನ ಪಾವಿತ್ರ್ಯತೆ ಮತ್ತು ಆಕೆಯ ಯೋಗಕ್ಷೇಮಕ್ಕಾಗಿ ಅವ್ಯವಸ್ಥೆ, ಮಹಿಳಾ ಅಸಮಾನತೆಯ ಲವಲೇಶವೂ ಅದರಲಿಲ್ಲ.
75 ಶೇಕಡಾಕ್ಕಿಂತ ಹೆಚ್ಚು ದಲಿತ, ಹಿಂದುಳಿದ, ಶೋಷಿತ ಸಮಾಜದ ಬಂಧುಗಳೇ ಅಯ್ಯಪ್ಪ ವೃತಧಾರಿಗಳಾಗಿರುವ ಕ್ಷೇತ್ರದ ಸಂಪ್ರದಾಯದ ನಾಶ ಆ ಸಮಾಜದ ಬಂಧುಗಳ ಭಾವನೆಗಳ ಮೇಲೆ ನಡೆದಿರುವ ಕ್ರೂರ ದಾಳಿ ಇದಾಗಿದೆ. ತಾವು ಶೋಷಿತ ರಕ್ಷಕರೆಂಬ ಕಮ್ಯುನಿಸ್ಟರ- ನಾಸ್ತಿಕರ ಮುಖವಾಡ ಕಳಚಿ ಬಿದ್ದಿದೆ.
ಶಬರಿಮಲೆಯ ಪಾವಿತ್ರ್ಯತೆ , ಸಂಪ್ರದಾಯ ಉಳಿಸಬೇಕಾಗಿ ಕೇಂದ್ರಸರ್ಕಾರವನ್ನು ಹಿಂದೂ ಜಾಗರಣ ವೇದಿಕೆ ವಿನಮ್ರವಾಗಿ ವಿನಂತಿಸಿಕೊಂಡಿತು.