Recent Posts

Sunday, January 19, 2025
ಸಿನಿಮಾಸುದ್ದಿ

ಮಂಗಳೂರಿನಾದ್ಯಾಂತ ಗಿರ್‌ಗಿಟ್ ಹಿಡಿದು ರೌಂಡ್ ಹಾಕಲಿದ್ದಾರೆ ರೂಪೇಶ್ ಶೆಟ್ಟಿ – ಕಹಳೆ ನ್ಯೂಸ್

ಮಂಗಳೂರು: ಮಂಗಳೂರಿನಾದ್ಯಾಂತ ಗಿರ್‌ಗಿಟ್ ಹಿಡಿದು ರೌಂಡ್ ಹಾಕಲಿದ್ದಾರೆ ರೂಪೇಶ್ ಶೆಟ್ರು. ಚಿತ್ರದ ಪೋಸ್ಟರ್ ಮೂಲಕವೆ ಕರಾವಳಿಯ ಮನೆಮಾತಾಗಿರುವ ಮಾತಿನ ಮಲ್ಲ. ಕಾಮಿಡಿ ಕಿಂಗ್‌ಗಳ ದಂಡೆ ಇದ್ಯಾಂತೆ ಈ ಸಿನೆಮಾದಲ್ಲಿ.

ಹೌದು ರೂಪೇಶ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಚೊಚ್ಚಲ ಸಿನೆಮಾವು ಪ್ರೇಕ್ಷಕರಲ್ಲಿ ಬಹು ನೀರಿಕ್ಷೆಯನ್ನು ಹುಟ್ಟಿಸಿರುವುದಂತು ನಿಜ. ಈಗಾಗಲೇ ಸಿನೆಮಾದ ಶೂಟಿಂಗ್ ನಡೆಯುತ್ತಿದ್ದು, ನಟ ರೂಪೇಶ್ ಶೆಟ್ಟಿ ಕೋಸ್ಟಲ್ ವುಡ್ ಸೇರಿದಂತೆ ಸ್ಯಾಂಡಲ್ ವುಡ್‌ನಲ್ಲೂ ಬ್ಯುಸಿಯಾಗಿದ್ದಾರೆ. ಈ ಮೊದಲು ಐಸ್ ಕ್ರೀಂ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಲೈಪ್ ಈಸ್ ಗಿರ್‌ಗಿಟ್ ಸಿನೆಮಾ ಆರ್‌ಎಸ್ ಫಿಲಂಸ್ ಮತ್ತು ಮಕರ ಜ್ಯೋತಿ ಸಿನೆಮಾ ಬ್ಯಾನರ್‌ನಲ್ಲಿ ಮೂಡಿ ಬರಲಿರುವುದು ವಿಶೇಷ. ಈ ಚಿತ್ರದಲ್ಲಿ ರೂಪೇಶ್ ಶೆಟ್ಟಿ ಹಾಗೂ ಶಿಲ್ಪಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

“ಕೋಸ್ಟಲ್ ವುಡ್‌ನಲ್ಲಿ ಕಾಮಿಡಿ ಒಳಗೊಂಡ ಸಿನೆಮಾ ನಿರ್ದೇಶನ ಮಾಡಬೇಕೇಂಬ ಆಸೆ ಇತ್ತು. ಅದು ಇಂದು ಸಾಕಾರಗೊಂಡಿದೆ. ನನಗೆ ತುಳುನಾಡಿನ ಜನರ ಪ್ರೋತ್ಸಾಹ ಸರಿಯಾದ ರೀತಿಯಲ್ಲಿ ಸಿಗುತ್ತಿದೆ. ಈ ಸಿನೆಮಾ ಮಂಗಳೂರಿನ ಸುತ್ತಮುತ್ತ ಸೇರಿದಂತೆ ಹಲವು ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ. ಈ ಚಿತ್ರವನ್ನು ಅದಷ್ಟು ಬೇಗ ಬಿಡುಗಡೆಗೊಳಿಸುವ ಆಸೆ ಇದೆ.” ಎಂದು ನಟ ರೂಪೇಶ್ ಶೆಟ್ಟಿ ಹೇಳಿದ್ದಾರೆ

ಸದ್ಯ ಈ ಚಿತ್ರ ಪೋಸ್ಟರ್ ಮೂಲಕ ಸೌಂಡ್ ಮಾಡ್ತಾ ಇರೋದಂತೂ ಸತ್ಯ. ಪೋಸ್ಟರೇ ಈ ರೇಂಜಿಗೆ ಕ್ಲಿಕ್ ಆಗಿದೆ ಅಂದ್ರೆ ಈ ಸಿನೆಮಾ ಹೇಗರ‍್ಬೋದು ಅಲ್ವಾ? ಅದಕ್ಕೆ ನೀವೂ ಸ್ವಲ್ಪ ದಿನ ಕಾಯ್ಲೇ ಬೇಕು.
ರಾಜೇಂದ್ರ ಶೆಣೈ ಫಿಲ್ಮ್ ಬ್ಯೂರೋ ಕಹಳೆ ನ್ಯೂಸ್