ದೆಹಲಿ: ಲೋಕಸಭಾ ಚುನಾವಣೆಗೂ ಮುನ್ನವೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯ ಬಡವರಿಗೆ ಬಂಪರ್ ಉಡುಗೊರೆಯೊಂದನ್ನು ನೀಡಿದೆ.
ಮೇಲ್ವರ್ಗದಲ್ಲಿರುವ ಆರ್ಥಿಕವಾಗಿ ಹಿಂದುಳಿದವರಿಗೂ ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿ ನೀಡಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಸೋಮವಾರ ನವದೆಹಲಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ನಾಳೆ ಅಂದರೆ ಮಂಗಳವಾರ ಸಂಸತ್ ನಲ್ಲಿ ಈ ಐತಿಹಾಸಿಕ ಮಸೂದೆಯನ್ನು ಕೇಂದ್ರ ಸರ್ಕಾರ ಮಂಡಿಸಲಿದೆ.
ಈ ಮೂಸೂದೆ ಜಾರಿಗೆ ಬಂದರೆ ಉನ್ನತ ವರ್ಗಗಳಾದ ಜಾಟ್, ಗುಜ್ಜಾರ್, ರಜಪೂತ್, ಬನಿಯಾ, ಬ್ರಾಹ್ಮಣ ಸಮುದಾಯಕ್ಕೆ ಅನುಕೂಲವಾಗಲಿದೆ.
ಮೀಸಲಾತಿಗೆ ಇರುವ ಕೆಲ ಷರತ್ತುಗಳು
* ಶೇ.10ರಷ್ಟು ಮೀಸಲಾತಿ ಪಡೆಯಬೇಕಿದ್ದರೆ ಅವರ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕೆಳಗಿರಬೇಕು.
* 5 ಎಕರೆ ಭೂಮಿ, 1000 ಚದುರ ಅಡಿಗಿಂತ ಕಡಿಮೆ ವಿಸ್ತೀರ್ಣ ಮನೆ ಹೊಂದಿರಬೇಕು.