Recent Posts

Monday, January 20, 2025
ಸುದ್ದಿ

ಚಿಕ್ಕಮಗಳೂರು ಗಾಂಧಿ ಪಾರ್ಕಿನಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆ – ಕಹಳೆ ನ್ಯೂಸ್

ಚಿಕ್ಕಮಗಳೂರು: ವಿಷ ಸೇವಿಸಿ ಪ್ರೇಮಿಗಳು ಸಾವನ್ನಪ್ಪಿದ ಘಟನೆ ಚಿಕ್ಕಮಂಗಳೂರಿನ ಗಾಂಧಿ ಪಾರ್ಕಿನಲ್ಲಿ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಗಾಳಿಗುಂಡಿ ನಿವಾಸಿ ಮಧು ಮತ್ತು ಶಂಕರಪುರ ನಿವಾಸಿ ರೂಪ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು.

ಕಳೆದ ಒಂದು ವರ್ಷಗಳಿಂದ ಪ್ರೀತಿಸ್ತಾ ಇದ್ದ ಪ್ರೇಮಿಗಳು ಗಾಂಧಿ ಪಾರ್ಕಿನಲ್ಲಿ ವಿಷ ಸೇವಿಸಿದ್ದು, ಮೊದಲು ಯುವಕ ಮೃತಪಟ್ಟಿದ್ದು, ನಂತ್ರ ಒಂದು ಗಂಟೆಯ ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ಯುವತಿ ಅಸುನೀಗಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭ ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಯ ಮುಂದೆ ಪೋಷಕರು ಕಣ್ಣೀರಿಟ್ಟು ಗೋಳಾಡುವ ದೃಶ್ಯ ಕಂಡು ಬಂದಿದೆ. ಈ ಬಗ್ಗೆ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು