Recent Posts

Monday, January 20, 2025
ಸುದ್ದಿ

ಬಡ ಕುಟುಂಬದ ಹೆಣ್ಣಿನ ಕಂಕಣ ಭಾಗ್ಯಕ್ಕೆ ನೇರವಾಗಿ ಮಾನವೀಯತೆ ಮೆರೆದ ತುಳುನಾಡ ಪೊರ್ಲು ಸೇವಾ ಟ್ರಸ್ಟ್ – ಕಹಳೆ ನ್ಯೂಸ್

ಬಂಟ್ವಾಳ: ತಾಲೂಕಿನ ವಿಟ್ಲ ಗ್ರಾಮದ ಅನ್ನಮೂಲೆಯಲ್ಲಿ 5 ಸೆಂಟ್ಸ್ ಜಾಗದಲ್ಲಿ ಮನೆಯಲ್ಲಿ ಮೂರುಮಂದಿ ಹೆಣ್ಣುಮಕ್ಕಳೊಂದಿಗೆ ವಾಸವಾಗಿದ್ದು ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದ 47 ವರ್ಷದ ವಿಶ್ವನಾಥ ಪೂಜಾರಿಯವರು ಹಠಾತ್ ಆಗಿ ಕುಳಿತಲ್ಲಿಯೇ ಮೇಲೆಳಲೂ ಆಗದೆ ತನ್ನ ದೇಹದ ಬಲಹೀನತೆಯನ್ನು ಕಳೆದುಕೊಂಡರು.

ಕಳೆದ 7 ವರ್ಷದಿಂದ ಪಾರ್ಶ್ವವಾಯು ಪೀಡಿತರಾಗಿದ್ದ ಇಬ್ಬರು ಹೆಣ್ಣುಮಕ್ಕಳ ಅಲ್ಪಸ್ವಲ್ಪ ದುಡಿಮೆಯಿಂದಲೇ ಕಷ್ಟದಲ್ಲೆ ಜೀವನ ಸಾಗಿಸುತ್ತಿದ್ದ ವಿಶ್ವನಾಥ ಪೂಜಾರಿಯವರ ಎರಡನೆಯ ಮಗಳ ಮದುವೆಯೂ ಇದೇ ಬರುವ ಡಿಸೆಂಬರ್ ತಿಂಗಳ 31ನೇ ಸೋಮವಾರದಂದು ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಿರಿಮಗಳಿಗೆ ಮದುವೆ ಮಾಡಿ ಇನ್ನೆನೂ ಸಾಲ ಮಾಡಿಯಾದರೂ ಎರಡನೆಯ ಮಗಳಾದ ಪ್ರತಿಭಾರವರ ಮದುವೆ ಮಾಡಬೇಕು ಅಂತ ಸಿದ್ದತೆಯ ಚಿಂತೆಯಲ್ಲಿ ಮಗ್ನರಾಗಿದ್ದ ವಿಶ್ವನಾಥ ಪೂಜಾರಿಯವರ ಧರ್ಮಪತ್ನಿ ಜಲಜಾಕ್ಷಿಯವರು ಹಠಾತ್ ಆಗಿ ಕಾಯಿಲೆಗೆ ಬಿದ್ದು ಮೇ ತಿಂಗಳಲ್ಲಿ ದೈವದೀನರಾದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಗಾಯದ ಮೇಲೆ ಬರೆ ಎಳೆದಂತೆ ಒಂದು ಕಡೆ ಮಗಳ ಮದುವೆಯ ಚಿಂತೆ ಇನ್ನೊಂದು ಕಡೆ ಮೊದಲ ಮಗಳ ಮದುವೆಗೆ ಮಾಡಿದ ಸಾಲದ ಸಂದಿಗ್ಧ ಪರಿಸ್ಥಿತಿಯಲ್ಲಿರುವ ವಿಶ್ವನಾಥ ಪೂಜಾರಿಯವರ ಕಷ್ಟವನ್ನು ಅರಿತ ತುಳುನಾಡ ಪೊರ್ಲು ಸೇವಾ ಟ್ರಸ್ಟ್ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿ ಬಿ.ಸಿ ರೋಡ್ ಇಲ್ಲಿ 25,000 ರೂಪಾಯಿಯ ಧನ ಸಹಾಯವನ್ನು ಮಗಳ ಮದುವೆಗೆ ನೆರವು ನೀಡಿ ಮಾನವೀಯತೆ ಮೆರೆದಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ಸೇವಾ ಕಾರ್ಯಕರ್ತರು ಉಪಸ್ಥಿತರಿದ್ದರು.