Recent Posts

Monday, January 20, 2025
ಸುದ್ದಿ

ಪುತ್ತೂರಿನಲ್ಲಿ ಗಣಿ ಹವ: ಬಿರುಸಿನಿಂದ ಸಾಗುತ್ತಿದೆ ಗಣೇಶ್ ಅಭಿನಯದ 99 ಚಿತ್ರ- ಕಹಳೆ ನ್ಯೂಸ್

ಪುತ್ತೂರು: ಪರ್ಲ್ ಸಿಟಿಯಲ್ಲಿ ಗಣಿ ಹವಾ. ಗುಬ್ಬಿ ನಿರ್ದೇಶನದಲ್ಲಿ ಮೂಡಿಬರಲಿದ್ಯಾಂತೆ 99. ಈ ಸಿನೆಮಾಕ್ಕೆ ಮ್ಯೂಸಿಕ್ ರಂಗು ಜನ್ಯ ನೀಡಲಿದ್ದಾರಂತೆ. ಸದ್ದಿಲ್ಲದೆ 99 ಸಿನೆಮಾ ಶೂಟಿಂಗ್ ಆರಂಭವಾಗಿದ್ದು ಪುತ್ತೂರು ಹಾಗೂ ಮಂಗಳೂರಿನಲ್ಲಿ ಚಿತ್ರೀಕರಣವು ಬಹಳ ಬಿರುಸಿನಿಂದ ಸಾಗುತ್ತಿದೆ.

ಅನೇಕ ದಿನಗಳಿಂದ ಈ ಸಿನೆಮಾ ಚಿತ್ರೀಕರಣ ಸಂತ ಫಿಲೋಮಿನಾ ಶಾಲೆಯಲ್ಲಿ ನಡೆಯುತ್ತಿದ್ದು ಗಣಿಯ ಬಾಲ್ಯವಸ್ಥೆ ಕುರಿತು ಪುತ್ತೂರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಚಿತ್ರದಲ್ಲಿ ನಾಯಕಿಯಾಗಿ ಜಾಕಿ ಖ್ಯಾತಿಯ ನಟಿ ಭಾವನ ನಟಿಸಲ್ಲಿದ್ದಾರೆ. ಇನ್ನು ಇಂಟ್ರೆಸ್ಟಿಂಗ್ ಅಂದ್ರೆ ಗೋಲ್ಡನ್ ಗಣಿಯ ಬಾಲ್ಯಕ್ಕೆ ನಟನೆಯ ಟಚ್ ನೀಡ್ತಿದ್ದಾರೆ ರಾಮಾಚಾರಿ ಖ್ಯಾತಿಯ ಜೂನಿಯರ್ ಯಶ್ ಹೇಮಂತ್ ಮಾಡಲಿದ್ದಾರೆ.

ಹಾಗೆ ಭಾವನ ಪಾತ್ರದಲ್ಲಿ ಧಾರವಾಹಿ ನಟಿ ಸಮೀಕ್ಷಾ ನಟಿಸಲಿದ್ದಾರಂತೆ. ಈ ಸಿನೆಮಾದ ಶೂಟಿಂಗ್ ಇನ್ನೆಷ್ಟು ದಿನಗಳ ಕಾಲ ನಡೆಯಲಿದ್ಯೋ ಗೊತ್ತಿಲ್ಲ. ಒಟ್ಟಿನಲ್ಲಿ ಗುಬ್ಬಿ ಗಣಿ ಕಾಂಬಿನೇಷನ್ ಹಿಟ್ ಆಗೋದ್ರಲ್ಲಿ ಎರಡು ಮಾತಿಲ್ಲ.
– ರಾಜೇಂದ್ರ ಶೆಣೈ ಫಿಲ್ಮ್ ಬ್ಯೂರೋ ಕಹಳೆ ನ್ಯೂಸ್..