Recent Posts

Sunday, January 19, 2025
ಸುದ್ದಿ

ಕಲ್ಲಡ ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ ನೀಡಿದ ಖ್ಯಾತ ನಟಿ ಅಮೂಲ್ಯ.

ಬಂಟ್ವಾಳ ಅ 26: ಕಲ್ಲಡ್ಕ ಶ್ರೀ ರಾಮ ವಿದ್ಯಾ ಸಂಸ್ಥೆ ಗೆ ಖ್ಯಾತ ಸ್ಯಾಂಡಲ್ ವುಡ್ ಕಲಾವಿದೆ, ಚೆಲುವಿನ ಚಿತ್ತಾರ ಚಿತ್ರದಲ್ಲಿ ಮಿಂಚಿದ ಅಮೂಲ್ಯ ಮತ್ತು ಅವರ ಪತಿ ಜಗದೀಶ್ ಭೇಟಿ ನೀಡಿದರು. ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರ ದಲ್ಲಿ ವಸುಧಾರ ಗೋಶಾಲೆಯಲ್ಲಿ ಗೋಪೂಜೆಯಲ್ಲಿ ಭಾಗವಹಿಸಿ ಬಳಿಕ ಶಿಶು ಮಂದಿರದ ಸೀತಾ ಕುಟೀರ ವನ್ನು ಉದ್ಘಾಟನೆ ಮಾಡಿದರು. ನಂತರ ಮಹೇಂದ್ರ ಕಟ್ಟಡ ದ ಶಿಲಾನ್ಯಾಸ ಕಾರ್ಯಕ್ರಮ ಹಾಗೂ ಜನಕ ಸಭಾಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಹಾರೈಸಿದರು. ಆ ಬಳಿಕ ಅಮೂಲ್ಯ ಮಾತನಾಡಿ ಈ ಶಿಕ್ಷಣ ಸಂಸ್ಥೆ ಯಿಂದ ನಾನು ಕಲಿತು ಕೊಳ್ಳಲು ಬಹಳಷ್ಟು ಇದೆ. ವಿದ್ಯಾ ಕೇಂದ್ರ ನೋಡಿ ಬಹಳಷ್ಟು ಖುಷಿ ತಂದಿದೆ. ಇಲ್ಲಿನ ಸಂಸ್ಕಾರ ಯುತವಾದ ಶಿಕ್ಷಣ ರಾಜ್ಯಕ್ಕೆ ಪಸರಿಸಲಿ ಮತ್ತು ಮುಖ್ಯ ವಾಗಿ ಬೆಂಗಳೂರು ನಗರಕ್ಕೆ ಸಂಸ್ಕಾರದ ಶಿಕ್ಷಣ ಅಗತ್ಯವಿದೆ ಎಂದರು. ಕಾರ್ಯಕ್ರಮದಲ್ಲಿ ಪುತ್ತೂರು ವಿವೇಕಾನಂದ ಕಾಲೇಜಿನ ಅದ್ಯಕ್ಷ ಡಾ.ಪ್ರಭಾಕರ ಭಟ್. ಪ್ರಮುಖ ರಾದ ಪದ್ಮನಾಭ ಕೊಟ್ಟಾರಿ, ಲಹರಿ ಕಂಪೆನಿ ಜಿ.ವೇಲು ಮುಂತಾದವರು ಭಾಗವಹಿಸಿದ್ದರು.

ಜಾಹೀರಾತು

ಜಾಹೀರಾತು
ಜಾಹೀರಾತು

Leave a Response