Saturday, September 21, 2024
ಸುದ್ದಿ

ಸತತ ಎರಡನೇ ಭಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ “ಯುವ ಬಂಟ್ಸ್ ಸೊರಕೆ” – ಕಹಳೆ ನ್ಯೂಸ್

ಬೆಟ್ಟಂಪಾಡಿ: ಯುವ ಬಂಟಾ ಸಂಘ ಪುತ್ತೂರು ತಾಲೂಕು ಇದರ ಸಂಯೋಗದೊಂದಿಗೆ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಸಮಿತಿ, ಪುತ್ತೂರು ತಾಲೂಕು ಬಂಟರ ಸಂಘ,ಪುತ್ತೂರು ತಾಲೂಕು ಮಹಿಳಾ ಬಂಟರ ಸಂಘ ಮತ್ತು ವಿದ್ಯಾರ್ಥಿ ಬಂಟರ ಸಂಘ ಪುತ್ತೂರು ಇವರ ಸಹಕಾರದೊಂದಿಗೆ ದಿ.ಜೀವನ್ ಬಂಡಾರಿ ಸಿದ್ಯಾಳ ಸ್ಮರಣಾರ್ಥವಾಗಿ “ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ” ಜನವರಿ 06-01-2019 ರಂದು ಬೆಟ್ಟಂಪಾಡಿ ನವೋದಯ ಪ್ರೌಡಾ ಶಾಲಾ ಬಿಲ್ವಗಿರಿ ಕ್ರೀಡಾಂಗಣ ಬೆಟ್ಟಂಪಾಡಿ,ಯಲ್ಲಿ ಯಶಸ್ವಿಯಾಗಿ ನಡೆಯಿತು.

ಫಲಿತಾಂಶ: ಪಂದ್ಯಾಟದ ಪ್ರಥಮ ಬಹುಮಾನವನ್ನು ಸತತವಾಗಿ ಎರಡನೆ ಭಾರಿಗೆ ಯುವ ಬಂಟ್ಸ್ ಸೊರಕೆ ತಂಡವು ಪಡೆದುಕೊಂಡು ಜಯಭೇರಿಬಾರಿಸಿದ್ರ‍್ರೆ, ದ್ವಿತಿಯ ಬಹುಮಾನವನ್ನು ಬಂಟ್ಸ್ ಇಲೆವನ್ ಸರ್ವೆ ತಂಡವು ತನ್ನದಾಗಿಸಿಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಇನ್ನು ಫೈನಲ್ ಪಂದ್ಯಾಟದ ಪಂದ್ಯ ಶ್ರೇಷ್ಠ ಎಂಬ ಹೆಗ್ಗಳಿಕೆಯನ್ನ ಶರತ್ ರೈ (ಸೊರಕೆ) ಪಡೆದುಕೊಂಡಿದ್ದಾರೆ, ಪ್ರಜ್ವಲ್ ರೈ (ಸೊರಕೆ) ಉತ್ತಮ ದಾಂಡಿಗ ಎಂಬ ಹೆಸರನ್ನಗಳಿಸಿದ್ರೆ, ಗುರುಪ್ರಸಾದ್ ರೈ (ಸೊರಕೆ) ಉತ್ತಮ ಆಲ್ ರೌಂಡರ್‌ಆಗಿ ಹೊರಹೊಮ್ಮಿದ್ದಾರೆ. ವೇಣುಗೋಪಾಲ್ ಶೆಟ್ಟಿ (ಸರ್ವೆ) ಉತ್ತಮ ಬೌಲರ್, ಕೌಶಿಕ್ ರೈ (ಸರ್ವೆ) ಉತ್ತಮ ಕ್ಷೇತ್ರರಕ್ಷಕ ಆದ್ರೆ, ಶನ್ಮಿತ್ ರೈ (ಸೊರಕೆ) ಉತ್ತರ ಕೀಪರ್ ಪಟ್ಟವನ್ನ ಅಲಂಕರಿಸಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ವಿಜೆತಾ ಯುವಾ ಬಂಟ್ಸ್ ಸೊರಕೆ ತಂಡ ಎರಡನೇ ಭಾರಿಗೆ ರೋಲಿಂಗ್ ಟ್ರೋಫಿಯನ್ನ ತನ್ನಲ್ಲಿ ಉಳಿಸಿಕೊಂಡಿದೆ “ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ” ಕ್ಕೆ ಪ್ರತ್ಯೇಕವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಯುವಾ ಬಂಟ್ಸ್ ಸೊರಕೆ ತಂಡದಿಂದ ಮನದಾಳದ ಕೃತಜ್ಞತೆಗಳನ್ನ ಸಲ್ಲಿಸಿದ್ದಾರೆ.