Tuesday, January 21, 2025
ಸುದ್ದಿ

ಹುಡುಗಿಯೊಬ್ಬಳು ನನ್ನ ಹೃದಯ ಕದ್ದಿದ್ದು, ಅದನ್ನು ಹುಡುಕಿ ಕೊಡಿ: ಕಂಪ್ಲೇಂಟ್ ಕೊಟ್ಟ ಕಿಲಾಡಿ – ಕಹಳೆ ನ್ಯೂಸ್

ಮಹಾರಾಷ್ಟ್ರದ ನಾಗಪುರದಲ್ಲಿ ವಿಚಿತ್ರವಾದ ಕಳವು ಪ್ರಕರಣವೊಂದು ನಡೆದಿದೆ. ಹುಡುಗಿಯೊಬ್ಬಳು ನನ್ನ ಹೃದಯ ಕದ್ದಿದ್ದು, ಅದನ್ನು ಹುಡುಕಿ ಕೊಡಿ ಎಂದು ಯುವಕನೊಬ್ಬ ಪೊಲೀಸರಿಗೆ ದೂರು ನೀಡಿದ್ದಾರೆ.

ಸಾಮಾನ್ಯವಾಗಿ ಸ್ವತ್ತು ಕಳವು, ನಾಪತ್ತೆ ಪ್ರಕರಣಗಳ ದೂರು ಬರುವುದು ಸಹಜ. ಆದರೆ, ಹೃದಯವನ್ನೇ ಕಳೆದುಕೊಂಡಿದ್ದು ಹುಡುಕಿ ಕೊಡುವಂತೆ ಯುವಕ ದೂರು ನೀಡಿದ್ದು ಪೊಲೀಸರನ್ನು ಚಿಂತೆಗೀಡು ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವಿಚಿತ್ರ ದೂರಿನಿಂದ ಕಂಗಾಲಾದ ಪೊಲೀಸರು, ಏನು ಮಾಡಬೇಕೆಂದು ತಿಳಿಯದೇ, ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಬಳಿಕ ಅನೌಪಚಾರಿಕ ಚರ್ಚೆ ನಡೆಸಿ, ಅಂತಹ ದೂರುಗಳನ್ನು ದಾಖಲಿಸಿಕೊಳ್ಳಲು ಅವಕಾಶವಿಲ್ಲ ಎಂದು ತಿಳಿ ಹೇಳಿ ಯುವಕನನ್ನು ಕಳುಹಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪೊಲೀಸ್ ಆಯುಕ್ತ ಭೂಷಣ್ ಕುಮಾರ್ ಉಪಾಧ್ಯಾಯ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ಈ ವಿಷಯ ತಿಳಿಸಿದ್ದಾರೆ.