Tuesday, January 21, 2025
ಸುದ್ದಿ

ನಕಲಿ ವೈದ್ಯನ ಇಂಜೆಕ್ಷನ್‌ಗೆ ನವ ವಿವಾಹಿತೆ ಬಲಿ – ಕಹಳೆ ನ್ಯೂಸ್

ಹೊಟ್ಟೆ ನೋವಿನಿಂದ ಬಳಲುತ್ತಿದ್ದ ನವ ವಿವಾಹಿತೆಯೊಬ್ಬಳು ನಕಲಿ ವೈದ್ಯನ ಇಂಜೆಕ್ಷನ್‌ಗೆ ಬಲಿಯಾದ ಘಟನೆ ಜಮಖಂಡಿಯಲ್ಲಿ ನಡೆದಿದೆ.

ಬಬಲೇಶ್ವರ್ ತಾಲೂಕಿನ ಹೊಕ್ಕುಂಡಿ ಗ್ರಾಮದ ಸವಿತಾ ಪಾಟೀಲ್ ಮೃತ ನವ ವಿವಾಹಿತೆ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಸವಿತಾ ಗ್ರಾಮದ ಎಮ್ ಆರ್‌ಪಿ ವೈದ್ಯನ ಬಳಿ ತೋರಿಸಿದ್ದರು. ಈ ವೇಳೆ ಆತ ಇಂಜೆಕ್ಷನ್ ಮಾಡಿದ್ದು, ರಿಯಾಕ್ಷನ್ ಆಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಪೋಷಕರು ಯುವತಿಯನ್ನು ನಿನ್ನೆ ಸಾಯಂಕಾಲ ಜಮಖಂಡಿ ಕೆಎಲ್ ಇ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಯುವತಿ ಸಾವನ್ನಪ್ಪಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಕಲಿ ವೈದ್ಯನ ಯಡವಟ್ಟಿನಿಂದ ತಮ್ಮ ಮಗಳು ಸಾವನ್ನಪ್ಪಿದ್ದು, ಕೂಡಲೇ ಆತನನ್ನು ಬಂಧಿಸಿ ಕ್ರಮ ಜರಗಿಸುವಂತೆ ಪೋಷಕರು ಆಸ್ಪತ್ರೆ ಬಳಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಸಂಬಂಧ ಬಬಲೇಶ್ವರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.