Recent Posts

Sunday, January 19, 2025
ಸುದ್ದಿ

ಪೇಜಾವರ ಶ್ರೀ ಮತ್ತೆ ಅಸ್ವಸ್ಥ | ಆಸ್ಪತ್ರೆಗೆ ದಾಖಲು, ಡಿಶ್ಚಾರ್ಜ್!

ಉಡುಪಿ : ಹಠಾತ್ ಹೊಟ್ಟೆನೋವು ಕಾಣಿಸಿಕೊಂಡ ಕಾರಣ ಬುದವಾರ ಸಂಜೆ ಆಸ್ಪತ್ರೆಗೆದಾಖಲಾಗಿದ್ದ ಪೇಜಾವರ ಶ್ರೀ ವಿಶ್ವೇಶ್ವ ತೀರ್ಥ ಶ್ರೀಗಳು ಚಿಕಿತ್ಸೆ ಪಡೆದು ಇಂದು ಸಂಜೆ ಶ್ರೀ ಕೃಷ್ಣ ಮಠಕ್ಕೆ ಮರಳಿದ್ದಾರೆ. ಈ ವೇಳೆಶ್ರೀಗಳು ಮಾದ್ಯಮದೊಂದಿಗೆ ಮಾತನಾಡಿದ್ರು ಪೂಜೆ, ನಿತ್ಯಕಾರ್ಯಗಳಲ್ಲಿ ಯಾವುದೇ ನಿರ್ಬಂಧ ವಿಲ್ಲ ಆದರೆ ವಿಶ್ರಾಂತಿ ಬಳಿಕಪೂಜೆಯಲ್ಲಿ ತೊಡಗಲಿದ್ದೇನೆ. ಗುಡಿ ಕೈಗಾರಿಕೆಗಳನ್ನು ಜಿ.ಎಸ್.ಟಿಯಿಂದಮುಕ್ತ ಮಾಡಬೇಕೆಂದು ಕೈಗೊಂಡಿರುವ ಉಪವಾಸಕ್ಕೆ ನನ್ನ ಬೆಂಬಲ ವಿದೆಎಂದ್ರು. ಕೆಲವು ದಿನಗಳ ಹಿಂದೆ ಶ್ರೀಗಳಿಗೆ ಹರ್ನಿಯಾ ಶಸ್ತ್ರ ಚಿಕಿತ್ಸೆ ನಡೆದಿತ್ತುನಿನ್ನೆ ಮತ್ತೆ ಹರ್ನಿಯಾಕ್ಕೆ ಸಂಬಂಧಿಸಿ ಇನ್ನೋಂದು ಶಸ್ತ್ರಚಿಕಿತ್ಸೆ ನಡೆಯಿತು.ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು ನಿನ್ನೆ ಸಂಜೆಯೇ ಆಸ್ಪತ್ರೆಯಿಂದ ಶ್ರೀ ಕೃಷ್ಣಮಠಕ್ಕೆ ಮರಳುವ ಸಾಧ್ಯತೆ ಇತ್ತು. ಆದರೆ ಆರೋಗ್ಯದ ದೃಷ್ಟಿಯಿಂದ ನಿನ್ನೆಆಸ್ಪತ್ರೆಯಲ್ಲಿಯೇ ವಿಶ್ರಾಂತಿ ಪಡೆದಿದ್ದರು. ಇಂದು ಶ್ರೀಗಳು ಆಸ್ಪತ್ರೆಯಿಂದಮಠಕ್ಕೆ ಮರಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response