Sunday, November 24, 2024
ಸುದ್ದಿ

ವಿಜಯಾ ಬ್ಯಾಂಕ್ ವಿಲೀನ ವಿಚಾರ: ಬಿಜೆಪಿ ವಿರುದ್ಧ ಕಿಡಿಕಾರಿದ ಐವನ್ ಡಿಸೋಜ – ಕಹಳೆ ನ್ಯೂಸ್

ವಿಜಯಾ ಬ್ಯಾಂಕ್, ಬರೋಡಾ ಬ್ಯಾಂಕ್‌ನೊಂದಿಗೆ ವಿಲೀನ ಆಗುವುದು ಸರಿ ಎಂದು ಬಿಜೆಪಿಯವರು ಸಮರ್ಥನೆ ನೀಡುತ್ತಿದ್ದಾರೆ. ಬ್ಯಾಂಕ್ ಆಫ್ ಬರೋಡಾ ದೊಡ್ಡ ಬ್ಯಾಂಕ್, ಅದರ ವ್ಯವಹಾರ ಜಾಸ್ತಿ ಇದೆ. ಬ್ರಾಂಚ್‌ಗಳು ಜಾಸ್ತಿ ಇದೆ, ಅನ್ನೊ ಭಾವನೆ ಬಿಜೆಪಿಯವರದ್ದು, ಆದ್ರೆ ಬ್ಯಾಂಕ್ ಅಫ್ ಬರೋಡಾ ನಷ್ಟದಲ್ಲಿದ್ದರು, ಬ್ಯಾಂಕ್ ದೊಡ್ಡದು ಅನ್ನೊ ಕಾರಣಕ್ಕೆ ವಿಜಯ ಬ್ಯಾಂಕ್‌ನ್ನು ಬರೋಡಾ ಬ್ಯಾಂಕ್‌ನ ಜೊತೆ ವಿಲೀನ ಮಾಡೋದು ಸರಿ ಎಂದು ಹೇಳಿಕೆ ನೀಡಿದ್ದಾರೆ ಆದರೆ ಈ ಹೇಳಿಕೆಯನ್ನ ಕಾಂಗ್ರೆಸ್ ಪಕ್ಷ ತೀವ್ರವಾಗಿ ವಿರೋದಿಸುತ್ತದೆ ಎಂದು ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಹೇಳಿದರು.

ನಗರದ ಪುರಭವನದ ಬಳಿಯಿರುವ ಗಾಂಧಿ ಪ್ರತಿಮೆಯಡಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಿ ಮಾತನಾಡಿದ ಅವರು, ನಾನು ಹಾಗೂ ಮಾಜಿ ಶಾಸಕ ಜೆ.ಆರ್.ಲೋಬೊ ಲೈಟ್ ಹೌಸ್ ಹಿಲ್ ರೋಡ್‌ಗೆ ವಿಜಯಾ ಬ್ಯಾಂಕ್ ನಿರ್ಮಾಣ ಮಾಡಿದ ಮುಲ್ಕಿ ಸುಂದರ್ ರಾಮ್ ಶೆಟ್ಟಿಯವರ ಮರುನಾಮಕರಣ ಮಾಡಲು ತಡೆಯಾಜ್ಞೆ ತಂದಿದ್ದೇವೆ ಎಂದು ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಆರೋಪ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ನಾನು ಯಾವ ತಡೆಯಾಜ್ಞೆಯನ್ನು ತಂದಿಲ್ಲ. ಆದರೆ ನಾನು ರಾಜಿಸೂತ್ರದ ಸಲಹೆ ಕೊಟ್ಟಿದ್ದೆ. ನಗರ ಕೇಂದ್ರ ಗ್ರಂಥಾಲಯದವರೆಗೆ ಸಂತ ಅಲೋಶಿಯಸ್ ರೋಡ್ ಎಂದು ಹೆಸರಿಡಿ ಅದಾದ ಬಳಿಕ ರೋಡ್‌ಗೆ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಹೆಸರಿಡಿ ಎಂದು ಸಲಹೆ ನೀಡಿದ್ದೆ.

ನನ್ನ ಮೇಲೆ ವೃಥಾ ಆರೋಪ ಮಾಡಲಾಗಿದೆ. ಈ ನಿಟ್ಟಿನಲ್ಲಿ ಹರಿಕೃಷ್ಣ ಬಂಟ್ವಾಳ ಅವರು ಒಂದು ಕ್ಷಮೆ ಕೇಳಬೇಕು.ಇಲ್ಲದಿದ್ದರೆ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವೆ ಎಂದು ಐವನ್ ಡಿಸೋಜ ಹೇಳಿದರು.