Wednesday, January 22, 2025
ಸುದ್ದಿ

ಬಾಲಿವುಡ್ ನಲ್ಲಿ ಸಂಚಲನ ಸೃಷ್ಟಿಸಿದ ಮುನ್ನಾಭಾಯ್ ಮತ್ತೊಮ್ಮೆ ತೆರೆಗೆ – ಕಹಳೆ ನ್ಯೂಸ್

ಕಳೆದೊಂದು ದಶಕದ ಹಿಂದೆ ಬಾಲಿವುಡ್ ನಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದ ‘ಮುನ್ನಾಭಾಯ್ ಎಂಬಿಬಿಎಸ್’ ಚಿತ್ರದ ಮೂರನೇ ಭಾಗ ಸೆಟ್ ಏರಲು ಸಿದ್ಧತೆ ನಡೆಸಿಕೊಂಡಿದ್ದು, ಎಲ್ಲ ಅಂದುಕೊಂಡಂತೆ ನಡೆದರೆ ಈ ವರ್ಷದಲ್ಲಿ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ.

2003 ರಲ್ಲಿ ‘ಮುನ್ನಾಭಾಯ್ ಎಂಬಿಬಿಎಸ್’ ಹಾಗೂ ಮೂರು ವರ್ಷದ ಬಳಿಕ ‘ಲಗೇ ರಹೋ ಮುನ್ನಾಭಾಯ್’ ಚಿತ್ರ ತೆರೆ ಕಂಡಿತ್ತು. ಈ ಎರಡು ಚಿತ್ರಗಳಲ್ಲಿ ಮುನ್ನಾಭಾಯ್ ಪಾತ್ರವನ್ನು ನಿರ್ವಹಿಸಿದ್ದ ಸಂಜಯ್ ದತ್ ಮೂಲಕ, ಆಸ್ಪತ್ರೆಗಳ ಚಿತ್ರಣವನ್ನು ನಿರ್ದೇಶಕ ರಾಜ್ ಕುಮಾರ್ ಹಿರಾನಿ ತೆರೆದಿಟ್ಟಿದ್ದರು. ಇದೀಗ ಇದೇ ಚಿತ್ರದ ಮೂರನೇ ಸರಣಿ ಬರಲು ಸಜ್ಜಾಗಿದೆ ಎಂದು ನಟ ಅರ್ಷದ್ ವಾರ್ಸಿ ಬಾಯಿಬಿಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎರಡೂ ಚಿತ್ರಗಳಲ್ಲಿ ಸಂಜಯ್ ದತ್ ಜತೆ ಕಾಣಿಸಿಕೊಂಡಿರುವ ಅರ್ಷದ್ ಈ ಬಗ್ಗೆ ಮಾತನಾಡಿದ್ದು, ಈಗಾಗಲೇ ರಾಜ್ ಕುಮಾರ್ ಹಿರಾನಿ ಮೂರನೇ ಚಿತ್ರಕ್ಕೆ ಸ್ಕ್ರಿಪ್ಟ್ ಬರೆಯುತ್ತಿದ್ದಾರೆ. ಈ ವರ್ಷದ ಮಧ್ಯ ಅಥವಾ ಅಂತಿಮದಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈಗಾಗಲೇ ಎರಡು ಚಿತ್ರಗಳಲ್ಲಿ ಒಂದೇ ಪಾತ್ರವನ್ನು ನಿರ್ವಹಿಸಿದ್ದು, ದಶಕದ ಬಳಿಕ ಅದೇ ಪಾತ್ರ ನಿರ್ವಹಿಸುವುದಕ್ಕೆ ಸ್ವಲ್ಪ ಹೆದರಿಕೆಯಿದೆ. ಕಳೆದ ಬಾರಿ ಮುನ್ನಾಭಾಯ್ ಎಂಬಿಬಿಎಸ್ ಬಳಿಕ ಎರಡನೇ ಚಿತ್ರದಲ್ಲಿ ನಟಿಸುವಾಗ ಕೆಲ ಬದಲಾವಣೆಯಾಗಿತ್ತು. ಆದರೆ ಮೊದಲ ಚಿತ್ರ ನೋಡಿಕೊಂಡು ಸರಿಪಡಿಸಿಕೊಂಡಿದ್ದೆ. ಈ ಬಾರಿಯೂ ಇದೇ ರೀತಿ ಹಳೇ ಚಿತ್ರವನ್ನು ನೋಡಿ ತಯಾರಿ ನಡೆಸುತ್ತೇನೆ ಎಂದಿದ್ದಾರೆ.