Wednesday, January 22, 2025
ಸುದ್ದಿ

ಬೆಂಕಿ ಹಚ್ಚಿಕೊಂಡಿದ್ದ ಅಭಿಮಾನಿ ಸಾವು: ಇದು ಅಭಿಮಾನವಲ್ಲ ಎಂದ ಯಶ್ – ಕಹಳೆ ನ್ಯೂಸ್

ಬೆಂಗಳೂರು: ನಟ ಯಶ್ ಮನೆ ಎದುರು ಮಂಗಳವಾರ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ ರವಿ (28) ಬುಧವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಹೊಸಕೆರೆಹಳ್ಳಿಯಲ್ಲಿರುವ ಯಶ್ ನಿವಾಸದ ಎದುರು ಲಗ್ಗೆರೆಯ ನಿವಾಸಿ ರವಿ ಮಧ್ಯಾಹ್ನ ಬೆಂಕಿ ಹಚ್ಚಿಕೊಂಡಿದ್ದ,ಶೇ.80 ರಷ್ಟು ಸುಟ್ಟ ಗಾಯಗಳಾಗಿದ್ದ ಆತನನ್ನು ಸ್ಥಳೀಯರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆತ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಿರಿಯ ನಟ ಅಂಬರೀಷ್ ನಿಧನ ಹಿನ್ನೆಲೆಯಲ್ಲಿ ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ನಟ ಯಶ್ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೂ ಮಂಗಳವಾರ ಬೆಳಗ್ಗೆ ಹೊಸಕೆರೆಹಳ್ಳಿಯಲ್ಲಿರುವ ಯಶ್ ಮನೆ ಎದುರು ಬಂದ ರವಿ, ತಾನು ಯಶ್‌ರನ್ನು ನೋಡಬೇಕೆಂದು ಹಠ ಮಾಡಿದ್ದ. ಭದ್ರತಾ ಸಿಬ್ಬಂದಿ ಒಳಗಡೆ ಬಿಡಲಿಲ್ಲ, ನೆಚ್ಚಿನ ನಟ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ಬೇಸರಗೊಂಡ ರವಿ, ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ.

ಇದು ಅಭಿಮಾನವಲ್ಲ..!
ವಿಷಯ ತಿಳಿಯುತ್ತಿದ್ದಂತೆ ನಟ ಯಶ್ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ರವಿ ಆರೋಗ್ಯ ವಿಚಾರಿಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಅಭಿಮಾನಿಯ ಈ ವರ್ತನೆ ಬಹಳ ಬೇಸರವಾಗಿದೆ. ಇದನ್ನು ಅಭಿಮಾನ ವೆಂದು ಹೇಳುವುದಿಲ್ಲ.

ಪ್ರತಿ ವರ್ಷ ಅಂಬಿ ಅಣ್ಣನ ಜತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದೆ. ಈ ವರ್ಷ ಅಂಬಿ ಅಣ್ಣ ನಮ್ಮೊಡನೆ ಇಲ್ಲ ಎಂದು ಹುಟ್ಟುಹಬ್ಬ ಬೇಡ ಎಂದು ಹೇಳಿದ್ದೆ. ಇದೇ ಕೊನೆ, ಯಾರೇ ಅಭಿಮಾನಿಗಳು ಈ ರೀತಿ ಮಾಡಿಕೊಂಡರೆ ಮತ್ತೂಮ್ಮೆ ನಾನು ಎಲ್ಲಿಗೂ ಬರುವುದಿಲ್ಲ ಎಂದು ಯಶ್ ಖಡಕ್ ಆಗಿ ಹೇಳಿದ್ದಾರೆ.