Wednesday, January 22, 2025
ಸುದ್ದಿ

ಬಂದ್‌ನಿಂದ ರಾಜ್ಯ ಸಾರಿಗೆಗೆ ಆದ ನಷ್ಟಗಳೆಷ್ಟು? – ಕಹಳೆ ನ್ಯೂಸ್

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಕರೆ ಕೊಟ್ಟಿರುವ ಭಾರತ್ ಬಂದ್ ನಿಂದಾಗಿ ಸರ್ಕಾರಿ ಸಾರಿಗೆ ಸಂಸ್ಥೆಗೆ ಭಾರೀ ನಷ್ಟ ಉಂಟಾಗಿದೆ.

ಭಾರತ್ ಬಂದ್ ಹಿನ್ನೆಲೆಯಲ್ಲಿ ನಿನ್ನೆ ಪ್ರಯಾಣಿಕರ ಕೊರತೆಯಿಂದಾಗಿ ಸಾರಿಗೆ ಇಲಾಖೆಗೆ ಕೋಟಿ ಕೋಟಿ ನಷ್ಟವಾಗಿದೆ. ಹಾವೇರಿ ವಿಭಾಗದಲ್ಲಿ ೪೦ ಲಕ್ಷ ರೂ. ಉತ್ತರ ಕನ್ನಡದಿಂದ 50 ಲಕ್ಷ ರೂ. ಕೊಪ್ಪಳ 20 ಲಕ್ಷ ರೂ. ಬೆಳಗಾವಿ 65 ಲಕ್ಷ ರೂ. ದಾವಣಗೆರೆ 30 ಲಕ್ಷ ರೂ. ಹಾಗೂ ರಾಯಚೂರಿನಿಂದ 70 ಲಕ್ಷ ರೂ. ನಷ್ಟ ಉಂಟಾಗಿದೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದೇಶಾದ್ಯಂತ ಬಂದ್ ಹಿನ್ನೆಲೆಯಲ್ಲಿ ಎರಡನೇ ದಿನವೂ ಮುಷ್ಕರ ನಡೆಯುತ್ತಿದ್ದು, ಇಂದು ಹಲವೆಡೆ ಸರ್ಕಾರಿ ಬಸ್ ಗಲ ಮೇಲೆ ಕಲ್ಲು ತೂರಾಟ ನಡೆಸಿರುವ ಕಾರಣ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು, ಇಂದು ಕೂಡ ಸಾರಿಗೆ ಇಲಾಖೆಯ ಆದಾಯದಲ್ಲಿ ಭಾರೀ ಇಳಿಕೆಯಾಗುವ ಸಾಧ್ಯತೆ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು