Wednesday, January 22, 2025
ಸುದ್ದಿ

ಮಟನ್ ಅಂಗಡಿಯಲ್ಲಿ ಜಿಂಕೆ ಮಾಂಸ ಪತ್ತೆ: ಅರಣ್ಯ ಸಂರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲು – ಕಹಳೆ ನ್ಯೂಸ್

ಮಾಂಸ ಮಾರಾಟ ಮಾಡುವ ಅಂಗಡಿಯಲ್ಲಿ ಜಿಂಕೆ ಮಾಂಸ ಪತ್ತೆಯಾಗಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.

ಬೈಪಾಸ್ ರಸ್ತೆಯ ನ್ಯೂ ಮಂಡ್ಲಿ ಬಡಾವಣೆಯ ಸುಲ್ತಾನ್ ಮೊಹಲ್ಲಾದ 1 ಕ್ರಾಸ್‌ನಲ್ಲಿರುವ ಮಟನ್ ಅಂಗಡಿಯಲ್ಲಿ ಜಿಂಕೆ ಮಾಂಸ ಪತ್ತೆಯಾಗಿದ್ದು, ಈ ಸಂಬಂಧ ತೀರ್ಥಹಳ್ಳಿ ತಾಲೂಕು ಮಂಡಗದ್ದೆ ಸಮೀಪದ ಕಣಗಲ್ಕೊಪ್ಪದ ನಿವಾಸಿ ಸೈಯದ್ ಸಿರಾಜ್ ಎಂಬಾತನು ಇದೀಗ ಅರಣ್ಯ ಇಲಾಖೆ ಸಂಚಾರಿ ದಳದ ತಂಡ ಅತಿಥಿಯಾಗಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಖಚಿತ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆಸಿದ ಅರಣ್ಯ ಸಂಚಾರಿದಳ ಮಾಂಸದಂಗಡಿಯಲ್ಲಿದ್ದ ಜಿಂಕೆಯ ತಲೆ, ನಾಲ್ಕು ಕಾಲು, ಚರ್ಮವನ್ನು ವಶಕ್ಕೆ ಪಡೆದಿದ್ದಾರೆ.

ತಲೆಮರೆಸಿಕೊಂಡಿರುವ ಮತ್ತೊಬ್ಬನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಆರೋಪಿಗಳ ವಿರುದ್ದ ಅರಣ್ಯ ಸಂರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.