Thursday, January 23, 2025
ಸುದ್ದಿ

ಮಣ್ಣು ಕುಸಿದು ಸಿಲುಕಿಕೊಂಡಿದ್ದ ಮೂವರು ಕಾರ್ಮಿಕರ ರಕ್ಷಣೆ – ಕಹಳೆ ನ್ಯೂಸ್

ಮೈಸೂರು: ಒಳಚರಂಡಿ ಕಾಮಗಾರಿ ಸಂದರ್ಭದಲ್ಲಿ ಮಣ್ಣು ಕುಸಿದು ಸಿಲುಕಿಕೊಂಡಿದ್ದ ಮೂವರು ಕಾರ್ಮಿಕರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ ಘಟನೆ ಮೈಸೂರು ತಾಲ್ಲೂಕಿನ ದಾಸನಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಒಳಚರಂಡಿ ಕೊಳವೆ ಕಾಮಗಾರಿ ನಡೆಯುತ್ತಿದ್ದ ವೇಳೆ ಜೆಸಿಬಿ ಯಂತ್ರದ ಮೂಲಕ ಆಳವಾದ ಗುಂಡಿ ತೆಗೆಯಲಾಗಿತ್ತು. ಗುಂಡಿಗೆ ಕಾರ್ಮಿಕರಾದ ಕೆ.ಆರ್.ಪೇಟೆಯ ಚಂದನ್ ಉದ್ದಗೂರಿನ ಪುಟ್ಟರಾಜು ಹಾಗೂ ವಾಜಮಂಗಲದ ಮರಿಸ್ವಾಮಿ ೩ ಇಳಿದು ಕಾರ್ಮಿಕರು ಕೊಳವೆಗಳನ್ನು ಅಳವಡಿಸುತ್ತಿದ್ದಾಗ ಇವರ ಮೇಲೆ ಮಣ್ಣು ಕುಸಿದು ಮಣ್ಣನಡಿ ಸಿಲುಕೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ತಕ್ಷಣ ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ಇವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಿ ಜೀವರಕ್ಷಕ ಸಾಧನಗಳನ್ನು ನೀಡಿ ನಂತರ ಮಣ್ಣನ್ನು ಹೊರತೆಗೆದು ಅವರನ್ನು ರಕ್ಷಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಕಾಮಗಾರಿಗೆ ಮುಂಜಾಗ್ರತಾ ಕ್ರಮ ವಹಿಸದ ಗುತ್ತಿಗೆದಾರರ ಮಹೇಂದ್ರನ ವಿರುದ್ದ ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.