Thursday, January 23, 2025
ಸುದ್ದಿ

ಖಾಸಗಿ ವ್ಯಕ್ತಿಯಿಂದ ಬಂಟ್ವಾಳದ ಕೆದಿಲ ಗ್ರಾಮದ ಸತ್ತಿಕಲ್ಲು ಸರ್ಕಾರಿ ಶಾಲೆ ಜಾಗ ಅತಿಕ್ರಮಣ – ಕಹಳೆ ನ್ಯೂಸ್

ಬಂಟ್ವಾಳ: ಖಾಸಗಿ ವ್ಯಕ್ತಿಯೊಬ್ಬರು ಸರಕಾರಿ ಶಾಲೆಯ ನಿರ್ಮಾಣಕ್ಕೆ ಮೀಸಲಿರಿದ ಸ್ಥಳವನ್ನು ಅತಿಕ್ರಮಿಸಿದ್ದ ಹಿನ್ನಲೆಯಲ್ಲಿ ತಹಶೀಲ್ದಾರ್ ಅವರ ನೇತೃತ್ವದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ತೆರಳಿ ಅತಿಕ್ರಮಣ ತೆರವುಗೊಳಿಸಿದ ಘಟನೆ ತಾಲೂಕಿನ ಕೆದಿಲ ಗ್ರಾಮದ ಸತ್ತಿಕಲ್ಲು ಎಂಬಲ್ಲಿ ಮಂಗಳವಾರ ನಡೆದಿದೆ.

ಕಾರ್ಯಚರಣೆ ವೇಳೆ ಜಮೀನು ಅತಿಕ್ರಮಿತ ಖಾಸಗಿ ವ್ಯಕ್ತಿ ವಿರೋಧ ವ್ಯಕ್ತಪಡಿಸಿದರೂ ಕಂದಾಯಾಧಿಕಾರಿಗಳ ಕಟ್ಟುನಿಟ್ಟಿನ ಕಾರ್ಯಾಚರಣೆಯಿಂದಾಗಿ ಅತಿಕ್ರಮಿತ ಜಮೀನು ಮತ್ತೆ ಶಾಲೆಗೆ ಸಿಗುವಂತಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯ ಸತ್ತಿಕಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಯನಿರ್ವಹಿಸುತ್ತಿದೆ. ಬಿ.ಸಿ.ರೋಡು-ಅಡ್ಡಹೊಳೆ ಚತುಷ್ಪಥ ರಸ್ತೆ ನಿರ್ಮಾಣದ ಹಿನ್ನಲೆ ಶಾಲೆಗೆ ಕುತ್ತು ಬಂದಿದ್ದು ಶಾಲೆ ನಿರ್ಮಾಣಕ್ಕೆ ಪರ್ಯಾಯ ಸರಕಾರಿ ಸ್ಥಳವನ್ನು ಗುರುತಿಸಿ ಮೀಸಲಿಡಲಾಗಿತ್ತು. ಆದರೆ ಆ ಜಮೀನನ್ನು ಖಾಸಗಿ ವ್ಯಕ್ತಿಯೊಬ್ಬರು ಅತಿಕ್ರಮಿಸಿ ತೋಟವಾಗಿ ಮಾರ್ಪಡಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸುಮಾರು 1.95 ಎಕರೆ ವಿಸ್ತೀರ್ಣದ ಜಮೀನನ್ನು ಅತಿಕ್ರಮಿಸಿರುವ ಬಗ್ಗೆ ಶಾಲೆಯ ವತಿಯಿಂದ ತಹಶೀಲ್ದಾರ್ ಅವರಿಗೆ ದೂರು ನೀಡಲಾಗಿತ್ತು. ತಹಶೀಲ್ದಾರ್ ಅವರ ನಿರ್ದೇಶನದಂತೆ ಕಂದಾಯ ನಿರೀಕ್ಷಕ ದಿವಾಕರ ಮಗುಳಿ ಅವರ ನೇತೃತ್ವದಲ್ಲಿ ಜಮೀನು ಪರಿಶೀಲನೆ ನಡೆಸಿ ಸರಕಾರಿ ಜಮೀನು ಎಂಬುದನ್ನು ಖಚಿಸಿತಪಡಿಸಿಕೊಂಡು ಜೆಸಿಬಿ ಬಳಸಿ ಅತಿಕ್ರಮ ತೆರವುಗೊಳಿಸಿದರು. ಈ ಸಂದರ್ಭ ಕ್ರಮ ಗ್ರಾಮಕರಣಿಕ ವಿನೋದ್ ಕುಮಾರ್ ಹಾಜರಿದ್ದರು.

ಶಾಲಾ ಮುಖ್ಯ ಶಿಕ್ಷಕ ಶ್ರೀಪತಿ ನಾಯಕ್ ಹಾಗೂ ಶಿಕ್ಷಕಿಯರು ಸ್ಥಳದಲ್ಲಿದ್ದು ಶಾಲೆಯ ಹೆಸರಿನಲ್ಲಿ ಯಾವುದೇ ಸ್ಥಳವಿರುವುದಿಲ್ಲ, ಮೀಸಲಿಟ್ಟ ಜಮೀನಿನ ಪೈಕಿ ಈಗಾಗಲೇ ಅಕ್ರಮ ಸಕ್ರಮದಲ್ಲಿ 0.45 ಎಕರೆ ಜಮೀನು ಖಾಸಗಿ ವ್ಯಕ್ತಿಯ ಸ್ವಾಧೀನವಾಗಿದ್ದು ಉಳಿದ 1.45 ಎಕ್ರೆ ಸ್ಥಳವನ್ನು ಶಾಲೆಯ ಹೆಸರಿಗೆ ಒದಗಿಸಿಕೊಡಬೇಕೆಂದು ಅವರು ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.

ಕಾರ್ಯಾಚರಣೆ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್, ಬಿಆರ್‍ಪಿ ನಾರಾಯಣ ಗೌಡ, ಸಿಆರ್‍ಪಿ ಸತೀಶ್‍ರಾವ್ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭ ಸ್ಥಳೀಯ ಗ್ರಾ.ಪಂ.ಅಧ್ಯಕ್ಷ ಅಣ್ಣಪ್ಪ ಕುಲಾಲ್ ಸುದ್ದಿಗಾರರೊಂದಿಗೆ ಮಾತನಾಡಿ ಕೆದಿಲ ಗ್ರಾಮದಲ್ಲಿರುವ ಸತ್ತಿಕಲ್ಲು ಶಾಲೆಯು 50 ವರ್ಷದ ಹಳೆಯದಾಗಿದ್ದು ಬಡ ವಿದ್ಯಾರ್ಥಿಗಳಿಗಾಗಿ ಇಲ್ಲಿ ಸರಕಾರಿ ಶಾಲೆಯನ್ನು ಉಳಿಸುವ ಅಗತ್ಯವಿದೆ, ಈ ಸ್ಥಳವೂ ಶಾಲೆ ನಿರ್ಮಾಣಕ್ಕೆ ಸೂಕ್ತವಾಗಿದ್ದು ಶೀಘ್ರ ಶಾಲೆಯ ಹೆಸರಿನಲ್ಲಿ ದಾಖಲೆ ಪತ್ರವನ್ನು ಕಂದಾಯ ಇಲಾಖೆ ಮಾಡಿಕೊಡಬೇಕು ಒತ್ತಾಯಿಸಿದರು.

ಕೆದಿಲ ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್, ಶ್ಯಾಂ ಪ್ರಸಾದ್ ಹಾಗೂ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.