ಸುವರ್ಣ ತ್ರಿಭುಜ ಬೋಟ್ ಸಹಿತ 7 ಮಂದಿ ಮೀನುಗಾರರು ನಾಪತ್ತೆಯಾಗಿ ಹಲವಾರು ವಾರಗಳೆ ಕಳೆದರು ಇನ್ನು ಯಾವ ಸುಳಿವು ಸಿಕ್ಕಿಲ್ಲ. ಕಡತ ತಟದಲ್ಲಿ ನೀರವ ಮೌನ ಆವರಿಸಿದೆ.
ಅಬ್ಬರಿಸಿ ಬೊಬ್ಬಿರಿವ ಸಮುದ್ರದ ಅಲೆಗಳ ಅಬ್ಬರಕ್ಕೆ ಮೀನುಗಾರರ ಎದೆ ಒಂದು ಈಗಲು ಕ್ಷಣ ಝಲ್ ಎನ್ನುತ್ತಿದೆ, ಆದ್ರು ನಮ್ಮವರ ಹುಡುಗಾಟ ಅನಿವರ‍್ಯ. ಅದಕ್ಕಾಗಿ ಪ್ರತಿ ನಿತ್ಯ ಬೆಳಗೆದ್ದು ಆ ದೇವರಲ್ಲಿ ಎರಡು ಕೈ ಜೋಡಿಸಿ ಕಣ್ಣಿರಿಟ್ಟು ಕಣ್ಣೀರೆ ಬತ್ತಿ ಹೋಗಿದೆ.
ಹಾಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿ ಕಣ್ಮರೆಯಾದ ಮೀನುಗಾರರರು ಉತ್ತರ ಭಾಗದಲ್ಲಿದ್ದಾರೆ. ಅವರನ್ನ ಪತ್ತೆ ಮಾಡಲು ಮೀನುಗಾರರಿಂದ ಸಾಧ್ಯವಿಲ್ಲ, ಬದಲಿಗೆ ಪೊಲೀಸರು ಹಾಗೂ ಸೈನ್ಯವೇ ಬರಬೇಕು ಎಂದು ಬಡನಿಡಿಯೂರಿನಲ್ಲಿರುವ ದೈವ ಬೊಬ್ಬರ್ಯ ಪಾತ್ರಿ ನುಡಿದಿದ್ದಾರೆ.
ಡಿಸೆಂಬರ್ 13 ರಂದು ನಾಪತ್ತೆಯಾಗಿರುವ ಮೀನುಗಾರರ ಹುಡುಕಾಟ ನಡೆಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ತಕ್ಷಣ ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ನಾಪತ್ತೆಯಾದ ಮೀನುಗಾರರ ಕುಟುಂಬಗಳಿಗೆ ಧೈರ್ಯ ತುಂಬಬೇಕು ಎಂದು ಅವರು ತಿಳಿಸಿದ್ದಾರೆ.