ಪ್ರಪಂಚದಾದ್ಯಂತ ಭರ್ಜರಿ ಪ್ರದರ್ಶನ ಕಾಣ್ತಿರೋ ಕೆಜಿಎಫ್ ಸಿನಿಮಾ, ಈಗ ಪಾಕಿಸ್ತಾನದಲ್ಲೂ ತನ್ನ ಹವಾ ಎಬ್ಬಿಸಿದೆ. ಈ ಮೂಲಕ ಪಾಕಿಸ್ತಾನದಲ್ಲಿ ರಿಲೀಸ್ ಆಗ್ತಿರೋ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಕೆಜಿಎಫ್ ಪಾತ್ರವಾಗ್ತಿದೆ. ಪಾಕಿಸ್ತಾನದಲ್ಲಿ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ಹೌಸ್‌ಫುಲ್ ಪ್ರದರ್ಶನ ಕಾಣುವ ಸೂಚನೆ ನೀಡುತ್ತಿದೆ.
ರಿಲೀಸ್‌ಗೂ ಮುನ್ನವೇ ಇತ್ತು ಕ್ರೇಜ್!
ಪಾಕಿಸ್ತಾನಿಗರಿಗೆ ಭಾರತೀಯ ಸಿನಿಮಾಗಳು ಹೊಸದೇನಲ್ಲ. ಸಾಮಾನ್ಯವಾಗಿ ಹಿಂದಿ ಸಿನಿಮಾಗೆ ದೊಡ್ಡ ಅಭಿಮಾನಿ ಬಳಗ ಪಾಕಿಸ್ತಾನದಲ್ಲಿದೆ. ಅದ್ರಲ್ಲೂ ಸಲ್ಮಾನ್‌ಖಾನ್, ಶಾರುಖ್ ಖಾನ್ ಸಿನಿಮಾಗಳು ಅಂದ್ರೆ ಕಾದು ಸಿನಿಮಾ ನೋಡ್ತಾರೆ. ಈಗ ರಾಕಿ ಭಾಯ್‌ಗಾಗಿ ಕಾಯ್ತಿದ್ದಾರೆ.
ಇದುವರೆಗೂ ಅದೆಷ್ಟೋ ಹಿಂದಿ ಸಿನಿಮಾಗಳು ಪಾಕಿಸ್ತಾನದಲ್ಲಿ ರಿಲೀಸ್ ಆಗಿವೆ. ಕೇವಲ ಹಿಂದಿ ಸಿನಿಮಾಗಳಲ್ಲದೇ, ದಕ್ಷಿಣ ಭಾರತೀಯ ಸಿನಿಮಾಗಳಿಗೂ ಅಭಿಮಾನಿ ವರ್ಗವಿದೆ ಅನ್ನೋದಕ್ಕೆ ಕೆಜಿಎಫ್ ಸಿನಿಮಾಗೆ ಸಿಗ್ತಿರೋ ರೆಸ್ಪಾನ್ಸ್ ಸಾಕ್ಷಿ.
ಸಿನಿಮಾ ಬಿಡುಗಡೆಗೂ ಮೊದಲೇ ಪಾಕಿಸ್ತಾನದಲ್ಲಿ ಭಾರೀ ಬೇಡಿಕೆಯಿತ್ತು. ಟ್ರೈಲರ್ ನೋಡಿ ದಂಗಾಗಿದ್ದ ಅಲ್ಲಿನ ಜನ ಕೆಜಿಎಫ್ ರಿಲೀಸ್‌ಗೆ ಕಾಯುತ್ತಿದ್ದರು.
ಅಲ್ಲೂ ಸಿನಿಮಾದ ಮ್ಯೂಸಿಕ್, ಡೈಲಾಗ್ ಎಲ್ಲವೂ ಟ್ರೆಂಡ್ ಸೃಷ್ಟಿಸಿದದ್ವು. ಪಾಕಿಸ್ತಾನಿ ಯುವಕನೊಬ್ಬ ‘ಕೆಜಿಎಫ್ ಲಟ್ರೈರ್’ ನೋಡಿ ‘ಇದೊಂದು ಗ್ರೇಟ್ ಟ್ರೈಲರ್. ಮಾಮೂಲಿ ಸಲ್ಮಾನ್ ಖಾನ್ ಸಿನಿಮಾ ಇದಲ್ಲ. ಸಲ್ಮಾನ್ ಸಿನಿಮಾಗೂ ಮೀರಿದ ಸಿನಿಮಾ.
ನಾನಂತೂ ಖಂಡಿತಾ ಸಿನಿಮಾ ನೋಡ್ತೀನಿ’ ಅಂತಾ ಮನಸಾರೆ ಹೊಗಳಿ ತನ್ನ ಅನಿಸಿಕೆ ವ್ಯಕ್ತಪಡಿಸಿದ್ದ. ಈಗ ಕೆಜಿಎಫ್ ಪಾಕಿಸ್ತಾನದಲ್ಲಿ ನಾಗಾಲೋಟ ಮುಂದುವರೆಸಿದೆ.