Recent Posts

Monday, January 20, 2025
ಸುದ್ದಿ

ಗೋಕಳ್ಳರ ಅಟ್ಟಹಾಸ: ಬಜರಂಗದಳದ ಕಾರ್ಯಕರ್ತರಿಂದ ಹೋರಿಯ ರಕ್ಷಣೆ – ಕಹಳೆ ನ್ಯೂಸ್

ಪುತ್ತೂರು: ಗೋಕಳ್ಳರ ಅಟ್ಟಹಾಸ ತಡರಾತ್ರಿ ಹೋರಿಯನ್ನು ವಾಹನಕ್ಕೆ ತುಂಬಿಸುತ್ತಿರುವಾಗ ಸಮೀಪದಲ್ಲೇ ಇದ್ದ ಬಜರಂಗದಳದ ಕಾರ್ಯಕರ್ತರಿಂದ ಶಸ್ತ್ರಸ್ತ್ರದಾರಿ ಗೋಕಳ್ಳರಿಂದ ಹೋರಿಯ ರಕ್ಷಣೆ ಮಾಡಿದ್ದಾರೆ.

ಪುತ್ತೂರಿನ ಪರ್ಲಡ್ಕ ಜಂಕ್ಷನ್ ನಲ್ಲಿ 9/1/2019 ರ ಬುಧವಾರ ತಡರಾತ್ರಿ 5 ಜನ ಮುಸುಕುದಾರಿ ಮಾರಕಾಯುಧ ಗಳನ್ನು ಹೊಂದಿದ್ದ ಗೋ ಕಳ್ಳರ ಗುಂಪೂಂದು ಹೋರಿಯೊಂದನ್ನು ಅಮಲು ಭರಿಸುವ ಆಹಾರ ನೀಡಿ ತದ ನಂತರ ಅದನ್ನು ಕಟ್ಟಿ ನಡು ರಸ್ತೆಯಲ್ಲಿ ಎಳೆದುಕೂಂಡು ತಮ್ಮ ಸ್ಕಾರ್ಪಿಯೋ ವಾಹನಕ್ಕೆ ತುಂಬಿಸುತ್ತಿರುವಾಗ ಸಮೀಪದಲ್ಲೇ ಇದ್ದ ಬಜರಂಗದಳದ ಕಾರ್ಯಕರ್ತರ ಗಮನಕ್ಕೆ ಬಂದು ಹೋರಿಯನ್ನು ವಾಹನಕ್ಕೆ ತುಂಬಿಸಲು ಅಡ್ಡಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಗೋ ಕಳ್ಳರು ಕಲ್ಲು ತೂರಾಟ ಮಾಡಿ ಮಾರಕಾಯುಧಗಳನ್ನ ತೋರಿಸಿ ಬಜರಂಗದಳದ ಕಾರ್ಯಕರ್ತರನ್ನು ಭಯಗೊಳಿಸಲು ಯತ್ನಿಸಿದರು. ಇದಕ್ಯಾವುದಕ್ಕೂ ಜಗ್ಗದ ಕಾರ್ಯಕರ್ತರು ಹೋರಿಯ ರಕ್ಷಣೆಯಲ್ಲಿ ತೊಡಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊನೆಗೆ ಸೋಲೂಪ್ಪಿಕೊಂಡ ಗೊಕಳ್ಳರು ಹೋರಿಯನ್ನು ಬಿಟ್ಟು ತಮ್ಮ ವಾಹನ ದ ಬಳಿ ಬಂದಾಗ ಅದೇ ದಾರಿಯಲ್ಲಿ ಬಂದ ಬೀಟ್ ಪೋಲಿಸರನ್ನು ನೋಡಿ ತಮ್ಮ ಸ್ಕಾರ್ಪೀಯೋ ವಾಹನದಲ್ಲಿ ಕಾಲ್ಕಿತ್ತರು.

ಪೋಲಿಸರು ವಾಹನವನ್ನು ಬೆನ್ನಟ್ಟಿದ್ದರು ಗೊಕಳ್ಳರು ಪರಾರಿಯಾಗುವಲ್ಲಿ ಯಶಸ್ವಿಯಾದರು. ಇದೇ ಸ್ಕಾರ್ಪಿಯೋ ವಾಹನ ಕಳೆದ 1 ವರ್ಷದಿಂದ ಪುತ್ತೂರು,ಕೆಯ್ಯೂರು ಹಾಗೂ ಆನೇಕ ಕಡೆಗಳಲ್ಲಿ ಅಕ್ರಮ ಗೊಕಳ್ಳತನ ದಲ್ಲಿ ತೊಡಗಿದ್ದರು. ಹಲವಾರು ಕಡೆಗಳಲ್ಲಿ ಇದರ ಮೇಲೆ ಕೇಸ್ ದಾಖಲಿಸಿದರೂ ಇ ಗೊಕಳ್ಳರ ತಂಡವನ್ನು ಹಿಡಿಯುವಲ್ಲಿ ಪೋಲಿಸ್ ಇಲಾಖೆ ವಿಫಲವಾಗಿರುವುದು ವಿಪರ್ಯಾಸ.