Recent Posts

Monday, January 20, 2025
ಸುದ್ದಿ

ಸಿಲಿಂಡರ್ ಸ್ಫೋಟದಿಂದ 2 ಅಂಗಡಿಗಳಿಗೆ ಬೆಂಕಿ – ಕಹಳೆ ನ್ಯೂಸ್

ಚಿತ್ರದುರ್ಗ: ಸಿಲಿಂಡರ್ ಸ್ಫೋಟದಿಂದ 2 ಅಂಗಡಿಗಳಿಗೆ ಬೆಂಕಿ ತಗುಲಿದ್ದು, ಸುಟ್ಟು ಕರಕಲಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಭರಮಸಾಗರದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭರಮಸಾಗರ ಬಸ್ ನಿಲ್ದಾಣ ಬಳಿ ಮುಖ್ಯರಸ್ತೆಯ ಗೂಡಂಗಡಿಯಲ್ಲಿ ನಿನ್ನೆ ರಾತ್ರಿ ಸಿಲಿಂಡರ್ ಸ್ಪೋಟವಾಗಿದ್ದು, ಅಂಗಡಿಯಲ್ಲಿದ್ದ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಮೊದಲಿಗೆ ಗೂಡಂಗಡಿಯಲ್ಲಿ ಬೆಂಕಿ ತಗುಲಿದ್ದು, ಪಕ್ಕದ ಅಂಗಡಿಯವರು ಬೆಂಕಿ ನಂದಿಸಲು ಮುಂದಾಗುತ್ತಿದ್ದಂತೆ ಸಿಲಿಂಡರ್ ಸ್ಫೋಟಗೊಂಡಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ಮಾಹಿತಿ ತಿಳಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ. ಭರಮಸಾಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು