Friday, September 20, 2024
ಸುದ್ದಿ

‘ನ್ಯೂಯಾರ್ಕ್ ಟೈಮ್ಸ್’ನ 52 ಪ್ರವಾಸಿ ತಾಣಗಳಲ್ಲಿ ಎರಡನೇ ಸ್ಥಾನ ಪಡೆದ ಭಾರತದ ಸ್ಥಳ ಯಾವುದು ಗೊತ್ತಾ? – ಕಹಳೆ ನ್ಯೂಸ್

ಯುನೆಸ್ಕೋದ ಜಾಗತಿಕ ಪಾರಂಪರಿಕ ಪಟ್ಟಿಯಲ್ಲಿರುವ ಹಂಪಿ, ಇದೀಗ ಅಮೆರಿಕಾದ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ ಪಟ್ಟಿ ಮಾಡಿದ್ದ 52 ಪ್ರವಾಸಿ ತಾಣಗಳಲ್ಲಿ ಎರಡನೇ ಸ್ಥಾನ ಪಡೆದಿದೆ. ವಿಶೇಷವೆಂದರೆ ಭಾರತದ ಒಂದೇ ಒಂದು ಪ್ರವಾಸ ತಾಣ ಮಾತ್ರ ಈ ವರ್ಷದ ಲಿಸ್ಟ್‍ನಲ್ಲಿತ್ತು.

16 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯವಾಗಿದ್ದ ಹಂಪಿ ತನ್ನ ಶಿಲ್ಪಕಲೆಯ ಮೂಲಕ ಮೈನ್ ಟೂರಿಸ್ಟ್ ಸ್ಪಾಟ್ ಆಗಿತ್ತು. ಹಾಗಾಗಿ ಹಂಪಿ ಎರಡನೇ ಸ್ಥಾನವನ್ನ ಪಡೆದಿದೆ. ಮೊದಲನೇ ಸ್ಥಾನವನ್ನ ಕೆರೆಬಿಯನ್ ದ್ವೀಪವಾದ ಪೂಯಿರ್ಟೋ ರಿಕೊ ಪಡೆದಿದೆ. ಹಂಪಿಗೆ 2016-17 ರ ಅವಧಿಯಲ್ಲಿ 5.35 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರು. ಅಷ್ಟು ಜನರಲ್ಲಿ 38 ಸಾವಿರ ಪ್ರವಾಸಿಗರು ವಿದೇಶಿಗರಾಗಿದ್ದರು ಎಂದು ತಿಳಿದು ಬಂದಿದೆ. ಹಂಪಿಗೆ ಎರಡನೇ ಸ್ಥಾನ ಬಂದಿರುವುದರಿಂದ ವಿದೇಶದಲ್ಲಿ ಭಾರತಕ್ಕೆ ಮತ್ತೆ ಹೆಮ್ಮೆ ತಂದಿರುವ ವಿಷಯ ಅನ್ನುವುದರಲ್ಲಿ ಸಂಶಯವೇನಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು