Friday, September 20, 2024
ಸುದ್ದಿ

ನಡೆದಾಡುವ ದೇವರು ಶಿವಕುಮಾರ ಶ್ರೀಗಳು ಇಚ್ಛಾಮರಣಿ; ಡಾ.ರವೀಂದ್ರ – ಕಹಳೆ ನ್ಯೂಸ್

ನಡೆದಾಡುವ ದೇವರು ಶಿವಕುಮಾರ ಶ್ರೀಗಳು ಇಚ್ಛಾಮರಣಿ ಎಂದು ಡಾ.ರವೀಂದ್ರ ಹೇಳಿದ್ದಾರೆ. ಶ್ರೀಗಳ ಆರೋಗ್ಯ ವೈದ್ಯ ಡಾ.ರವೀಂದ್ರ ಅವರು ಮಾತನಾಡಿ ಶ್ರೀಗಳು ಬಯಸುವವರೆಗೆ ಚಿಕಿತ್ಸೆ ನೀಡುತ್ತೇವೆ. ಅವರ ದೇಹದ ಪ್ರೊಟೀನ್ ಅಂಶದಲ್ಲಿ ಸುಧಾರಣೆ ಆಗಿದೆ ಎಂದರು.

ಆದರೆ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಹಾಗಾಗಿ ಅವರಿಗೆ ಸ್ವಯಂ ಆಗಿ ಉಸಿರಾಡಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಸಮಯ ಬೇಕು. ಶ್ರೀಗಳಿಗೆ 112 ವರ್ಷ ವಯಸ್ಸು, ಈ ವಯಸ್ಸಿನಲ್ಲಿ 6 ಬಾರಿ ಎಂಡೋಸ್ಕೋಪಿ ಮಾಡಿಸಿಕೊಂಡಿದ್ದು, ಈಗಲೂ ಓಡಾಡುತ್ತಿದ್ದಾರೆ ಎಂದರೆ ದೈವೀ ಸಂಭೂತರು ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು