Recent Posts

Sunday, January 19, 2025
ಸುದ್ದಿ

ರೋಗಗ್ರಸ್ಥ ಮಗಳಿಗೆ ವಿಷಕೊಟ್ಟು ಕೊಂದ ಪಾಪಿ ತಂದೆ..! – ಕಹಳೆ ನ್ಯೂಸ್

ಯಲ್ಲಾಪುರ: ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ನೀಡಲು ಹಣ ವ್ಯಯಿಸಲಾಗದೇ ಹೆತ್ತ ತಂದೆಯೇ ತನ್ನ ಮಗಳಿಗೆ ವಿಷ ನೀಡಿ ಕೊಲೆಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕುಂಬ್ರಿಯಲ್ಲಿ ನಡೆದಿದೆ.

ನಾಗರಾಜ್ ಪೂಜಾರಿ ಮಗಳನ್ನು ಹತ್ಯೆ ಮಾಡಿದ ತಂದೆಯಾಗಿದ್ದು ನಯನಾ ತಂದೆಯಿಂದ ಹತ್ಯೆಗೀಡಾದ ಮಗಳಾಗಿದ್ದಾಳೆ. ನಾಗರಾಜ್ ಪೂಜಾರಿ ಮೂರು ಜನ ಹೆಣ್ಣು ಮಕ್ಕಳನ್ನು ಹೊಂದಿದ್ದು ಮೃತ ಮಗಳು ಕೊನೆಯವಳು. ಈ ಹಿಂದೆ ದಾನಿಗಳ ಸಹಾಯದಿಂದ ಈಕೆಗೆ ಬೈಪಾಸ್ ಸರ್ಜರಿ ಸಹ ಮಾಡಲಾಗಿತ್ತು. ಇತ್ತೀಚಿಗೆ ಹೆಂಡತಿ ಮನೆ ಬಿಟ್ಟು ಹೋಗಿದ್ದು, ಮೃತ ಮಗಳು ನಯನ ತಾಯಿ ಬೇಕೆಂದು ಹಟ ಹಿಡಿದಿದ್ದಳು ಈ ಸಮಯದಲ್ಲಿ ಮಗಳಿಗೆ ಕ್ರಿಮಿನಾಶಕ ತಿನ್ನಿಸಿ ಹತ್ಯೆ ಮಾಡಿದ್ದಾನೆ. ಪ್ರಕರಣ ಸಂಬಂಧ ಯಲ್ಲಾಪುರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು