Sunday, November 24, 2024
ಸುದ್ದಿ

ನೂತನ ಮರಳು ನೀತಿಯನ್ನು ಒಂದು ವಾರದಲ್ಲಿ ಪ್ರಕಟಿಸಲಾಗುವುದು: ಡಿಸಿಎಂ ಪರಮೇಶ್ವರ್ – ಕಹಳೆ ನ್ಯೂಸ್

ಇ ಟೆಂಡರ್ ಮೂಲಕವೇ ಮರಳುಗಾರಿಕೆ ಟೆಂಡರ್ ನೀಡುವುದನ್ನು ಮತ್ತಷ್ಟು ಬಿಗಿಗೊಳಿಸಿ ವೈಜ್ಞಾನಿಕ ಮರಳುಗಾರಿಕೆಗೆ ಅವಕಾಶ ನೀಡುವ ಕುರಿತು ನೂತನ ಮರಳು ನೀತಿಯನ್ನು ಒಂದು ವಾರದಲ್ಲಿ ಪ್ರಕಟಿಸಲಾಗುವುದು ಎಂದು ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಲೋಕೋಪಯೋಗಿ ಇಲಾಖೆಯ ಮೂಲಕ ಮರಳು ಬ್ಲಾಕ್ ಗಳನ್ನು ಹಂಚಿಕೆ ಮಾಡುವಲ್ಲಿ ಹಲವಾರು ಅಡೆತಡೆಗಳು ಉಂಟಾಗಿದ್ದವು.

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗಾಗಿ ಇ ಟೆಂಡರ್ ಮೂಲಕವೇ ಮರಳುಗಾರಿಕೆ ಟೆಂಡರ್ ನೀಡುವುದನ್ನು ಮತ್ತಷ್ಟು ಬಿಗಿಗೊಳಿಸಿ ಹೊಸ ಮರಳು ನೀತಿ ರೂಪಿಸಲು ಹಲವಾರು ಸಲಹೆಗಳು ಕೇಳಿಬಂದಿವೆ. ಒಂದು ವಾರದಲ್ಲಿ ಹೊಸ ನೀತಿ ಪ್ರಕಟಗೊಳ್ಳಲಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು