ಪಕ್ಷದ ಪ್ರಚಾರದ ವೇಳೆ ಗೂಢಚಾರಿಕೆಗೆ ಪೊಲೀಸರನ್ನು ದುರ್ಬಳಕೆ ಮಾಡಲಾಗಿದೆ: ಎನ್‌ಸಿಪಿ ಆರೋಪ – ಕಹಳೆ ನ್ಯೂಸ್
ಪಕ್ಷದ ಪ್ರಚಾರದ ವೇಳೆ ಗೂಢಚಾರಿಕೆ ಮಾಡಲು ಪೊಲೀಸರನ್ನು ದುರ್ಬಳಕೆ ಮಾಡಿಸಿಕೊಳ್ಳಲಾಗಿದೆ ಅಂತಾ ಎನ್‌ಸಿಪಿ ಆರೋಪಿಸಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಎನ್‌ಸಿಪಿ ರ‍್ಯಾಲಿಯ ಮೇಲೆ ಕಣ್ಣಿಡಲು ಪೊಲೀಸರನ್ನು ವಿಡಿಯೋಗ್ರಾಫರ್ ರೀತಿ ಬಳಸಿಕೊಂಡಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಬಿಜೆಪಿ ಹಿಂಬಾಗಿಲ ಮೂಲಕ ತುರ್ತುಪರಿಸ್ಥಿತಿ ಹೇರುತ್ತಿದೆ.
ಇದು ಪ್ರಜಾಪ್ರಭುತ್ವವೇ? ಯಾರ ಉದ್ಧಾರಕ್ಕಾಗಿ ಬಿಜೆಪಿ ಈ ರೀತಿ ಕೆಲಸ ಮಾಡುತ್ತಿದೆ ಅಂತಾ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಪ್ರಶ್ನಿಸಿದ್ದಾರೆ.