ಪಶ್ಚಿಮಘಟ್ಟ ಪ್ರದೇಶದ ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಗೋಳಿಬೇರು, ಕ್ಯಾರ್ತೂರು ಸಾರಂಗಿ, ಅತ್ಯಾಡಿ, ಗಂಗನಾಡು ಮೊದಲಾದ ಕಡೆಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ನಿನ್ನೆ ಮಧ್ಯಾಹ್ನ 2 ರಿಂದ 3 ಗಂಟೆ ಸುಮಾರಿಗೆ ಒಮ್ಮೆಲೆ ಒಂದೆರಡು ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ. ಇದೇ ವೇಳೆ ಭಾರಿ ಶಬ್ದ ಕೂಡ ಕೇಳಿ ಬಂದಿದ್ದು, ಜನರಲ್ಲಿ ಆತಂಕ ಮೂಡಿದೆ.
ಭೂಗರ್ಭ ಶಾಸ್ತ್ರಜ್ಞರು ಪರಿಶೀಲನೆ ನಡೆಸಿದಲ್ಲಿ ಭೂಮಿ ನಡುಗಿದ ಅನುಭವದ ಬಗ್ಗೆ ಹೆಚ್ಚಿನ ಮಾಹಿತಿ ಸಿಗಬಹುದು ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.