Sunday, November 24, 2024
ಸುದ್ದಿ

ಒಳ್ಳೆಯ ಚಿಂತನೆಗಳಿಂದ ಬದುಕು ಸನ್ಮಾರ್ಗದಲ್ಲಿ ನಡೆಯುತ್ತದೆ: ಕವಿತಾಅಡೂರು – ಕಹಳೆ ನ್ಯೂಸ್

ಪುತ್ತೂರು: ಒಳ್ಳೆಯ ಚಿಂತನೆಗಳು ಬದುಕಿನ ಹಾದಿಯನ್ನು ನಿರ್ಧರಿಸುತ್ತವೆ. ಸರ್ವರ ಒಳಿತಿಗಾಗಿ ನಮ್ಮನ್ನು ನಾವು ಕಠಿಣ ನಿರ್ಣಯಕ್ಕೆ ಒಳಪಡಿಸಿಕೊಂಡರೆ ಅದರಲ್ಲಿ ಯಾವುದೇ ತಪ್ಪಿಲ್ಲವೆಂದು ಭಗವದ್ಗೀತೆ ಹೇಳುತ್ತದೆ. ಅಂತಹ ಗ್ರಂಥಗಳನ್ನು ಅರಿತು ಬಾಳಿದರೆ ಪ್ರತಿಯೊಬ್ಬರ ಆಲೋಚನೆಗಳು ಅಥವಾ ನಿರ್ಧಾರಗಳು ಪರರಿಗೆ ತೊಂದರೆಯನ್ನು ಉಂಟುಮಾಡುವುದಿಲ್ಲ ಹಾಗೂ ಜೀವನವೂ ಸನ್ಮಾರ್ಗದಲ್ಲಿ ನಡೆಯುತ್ತದೆ ಎಂದು ಪುತ್ತೂರಿನ ಸುದಾನ ವಿದ್ಯಾಸಂಸ್ಥೆಯ ಶಿಕ್ಷಕಿ ಕವಿತಾಅಡೂರು ಹೇಳಿದರು.

ಅವರು ವಿವೇಕಾನಂದ ಕಾಲೇಜಿನ ವಿಕಾಸಂ ಸಂಸ್ಕೃತ ಸಂಘ ಮತ್ತು ಕಾಲೇಜಿನ ಐಕ್ಯುಎಸಿಯ ಸಹಯೋಗದಲ್ಲಿ ಆಯೋಜನೆಗೊಂಡ ಭಗವದ್ಗೀತಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಬುಧವಾರ ಮಾತನಾಡಿದರು.
ಭಗವದ್ಗೀತಾ ಪಾರಾಯಣವು ಮಾನವನ ತಲ್ಲಣಗೊಂಡ ಮನಸ್ಸಿಗೆ ಶಾಂತಿಯನ್ನು ಕಲ್ಪಿಸಿಕೊಡುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜೀವನದ ಸರ್ವತೋಮುಖ ಬೆಳವಣಿಗೆಯ ಜೊತೆಗೆ ಸತ್‌ಚಿಂತನೆಗಳನ್ನು ನೀಡುತ್ತದೆ. ನಾನೇ ಎಂಬ ಅಹಂಕಾರವನ್ನು ಕಳೆದುಕೊಳ್ಳುವಲ್ಲಿ ಗೀತೆಯು ಸಹಾಯಕಾರಿ. ಅದೇ ರೀತಿ ಯಾವುದೇ ಕೆಲಸವನ್ನು ಮಾಡುವಾಗ ಪ್ರತಿಫಲವನ್ನು ಅಪೇಕ್ಷಿಸದೆ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಬೇಕು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಭಗವದ್ಗೀತೆಯಲ್ಲಿ ಅಡಕವಾಗಿರುವ ಹಲವಾರು ವಿಚಾರಗಳು ಇಂದಿನ ಕಾಳಕ್ಕೆ ಬೋಧನೆಯಾಗುತ್ತದೆ. ನಮ್ಮ ಯೋಚನಾ ಲಹರಿಯನ್ನು ಸೃಷ್ಟಿಸಲು ಗೀತೆಯ ಪಾರಾಯಣವು ಸಹಕರಿಸುತ್ತದೆ. ಅದೇ ರೀತಿ ಮಾನವನ ಆಸೆ ಮತ್ತು ಬಯಕೆಯನ್ನು ನಿಗ್ರಹಿಸುವ ಅಪೂರ್ವ ಶಕ್ತಿ ಗೀತೆಯಲ್ಲಿದೆ ಎಂದು ನುಡಿದರು.

ಕಾಲೇಜಿನ ಐಕ್ಯೂಎಸಿ ಸಂಯೋಜಕ ಡಾ.ಶ್ರೀಧರ್ ಎಚ್.ಜಿ ಶುಭನುಡಿದರು. ಸಂಸ್ಕೃತ ಸಂಘದ ಸಂಯೋಜಕ ಡಾ.ಶ್ರೀಶ ಕುಮಾರ್ ಪ್ರಸ್ತಾವಿಸಿದರು. ಸಂಸ್ಕೃತ ವಿಭಾಗ ಮುಖ್ಯಸ್ಥೆ ಡಾ.ಉಮಾದೇವಿ, ವಿಕಾಸಂ ಸಂಘದ ಅಧ್ಯಕ್ಷ ನವನೀತ್ ಮತ್ತು ಕಾರ್ಯದರ್ಶಿ ಕಾವ್ಯರತ್ನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸ್ನೇಹಗೌರಿ ಸ್ವಾಗತಿಸಿ ಶಿಲ್ಪಾ ವಂದಿಸಿದರು. ವಿದ್ಯಾರ್ಥಿನಿ ಅಶ್ವಿನಿ ಕಾರ್ಯಕ್ರಮ ನಿರ್ವಹಿಸಿದರು.