ಕುಟುಂಬ ಸಮೇತ ಮದುವೆಗೆಂದು ಬೊಲೇರೋ ವಾಹನದಲ್ಲಿ ತೆರಳಿದ್ದವರು ವಾಹನ ಸಮೇತವಾಗಿ ಸೇತುವೆಯಿಂದ ಕೆಳಕ್ಕುರುಳಿದ ಘಟನೆ ನಡೆದಿದೆ. ಈ ಸಂದರ್ಭ ವಾಹನದಲ್ಲಿದ್ದ ಬೋಳ ಗ್ರಾಮದ ಮಹಿಳೆ ಡಯಾನಾ ಮೃತಪಟ್ಟಿದ್ದಾರೆ.
ಕಾರ್ಕಳ ತಾಲೂಕಿನ ಬೋಳ ಗ್ರಾಮದ ಪದವು ನಿವಾಸಿ ಸ್ಟ್ಯಾನಿ ಮಸ್ಕರೇನ್ಹಸ್ ಅವರು ಕುಟುಂಬ ಸಮೇತ ಮಂಗಳೂರಿಗೆ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದರು. ವಾಹನದಲ್ಲಿ ಸ್ಟ್ಯಾನಿ ಅವರ ಪತ್ನಿ ಡಯಾನಾ, ಮಕ್ಕಳಾದ ಶೆಲ್ಡನ್ ಮತ್ತು ಅರ್ಮಾನ್ ಜೊತೆಗಿದ್ದರು.
ಸಂಕಲಕರಿಯ ಸಮೀಪ ಶಾಂಭವಿ ನದಿ ಸೇತುವೆ ಮೇಲಿಂದ ಇವರಿದ್ದ ಬುಲೇರೋ ವಾಹನ ನದಿಗೆ ಬಿದ್ದಿದೆ. ನದಿಗುರುಳಿದ ವಾಹನ ಕಂಡು ಸ್ಥಳೀಯರು ನೀರಿಗೆ ಧುಮುಕಿ ಮೂವರನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ. ಆದರೆ ಡಯಾನಾ ಅವರು ಮೃತಪಟ್ಟಿದ್ದಾರೆ.