Saturday, November 23, 2024
ಸುದ್ದಿ

ಧರ್ಮಸ್ಥಳದಲ್ಲಿ ಪೂಜೆ ಮುಗಿಯುವವರೆಗೂ ಪ್ರಧಾನಿ ಮೋದಿ ಉಪವಾಸ !

ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಮಂಜುನಾಥ ಸ್ವಾಮಿಯ ದರ್ಶನದ ಪ್ರಯುಕ್ತ ಪೂಜೆ ಸಲ್ಲಿಸುವರೆಗೂ ಉಪವಾಸ ಮಾಡಿದ್ದಾರೆ.

ಸ್ವಾಮಿಯ ದರ್ಶನಕ್ಕಾಗಿ ಪ್ರಧಾನಿ ಮೋದಿ ಅವರು ಬೆಳಗ್ಗೆಯಿಂದ ಉಪವಾಸವಿದ್ದು, ದೇವರ ದರ್ಶನ ಹಾಗೂ ಪೂಜೆ ಆದ ಬಳಿಕ ಪ್ರಸಾದ ಸ್ವೀಕಾರ ಮಾಡಿ ನಂತರ ಉಪಾಹಾರ ಸೇವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗಾಗಿ ಬೆಳಗ್ಗಿನ ಉಪಾಹಾರವನ್ನು ಧರ್ಮಸ್ಥಳ ಕ್ಷೇತ್ರದ ಸುತ್ತುಪೌಳಿಯ ಹೊರಭಾಗದಲ್ಲಿರುವ ಕೊಠಡಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈಗ ಸುಮಾರು 11 ಗಂಟೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿಕೊಟ್ಟಿದ್ದಾರೆ. ಎಸ್ ಪಿಜಿ ಎನ್ ಎಸ್‍ಜಿ, ಪೊಲೀಸ್ ಅಧಿಕಾರಿಗಳು ದೇವಸ್ಥಾನ ಮತ್ತು ಹೆಲಿಪ್ಯಾಡ್‍ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ. ದೇವಸ್ಥಾನಕ್ಕೆ ಪ್ರವೇಶವಾದ ಕೂಡಲೇ ಪ್ರಧಾನಿ ಮೋದಿ ಪಂಚೆ ಮತ್ತು ಶಲ್ಯವನ್ನು ತೊಡಿಸುವ ವ್ಯವಸ್ಥೆ ಮಾಡಲಾಗಿದೆ. ನಂತರ ಪ್ರಧಾನಿ ಮಂಜುನಾಥಸ್ವಾಮಿಯ ದರ್ಶನ ಮಾಡಿದ್ದಾರೆ.
ಮಂಜುನಾಥಸ್ವಾಮಿಗೆ ವಿಶೇಷ ಪೂಜೆ ಮತ್ತು ರುದ್ರಾಭಿಷೇಕ ಮಾಡಲಿದ್ದು, ದೇವರ ವಿರುದ್ಧ ದಿಕ್ಕಿನಲ್ಲಿರುವ ಅಣ್ಣಪ್ಪಸ್ವಾಮಿ ಗುಡಿಗೆ ಭೇಟಿಕೊಟ್ಟು ಅಲ್ಲೂ ಪೂಜೆ ಸಲ್ಲಿಕೆ ಮಾಡಿರುತ್ತಾರೆ. ಅಷ್ಟೇ ಅಲ್ಲದೇ ಗುಡಿಯ ಹಿಂಭಾಗದಲ್ಲಿರುವ ಮಹಾಗಣಪತಿ ದೇವಸ್ಥಾನಕ್ಕೆ ತೆರಳಿ ಗಣಪತಿಗೆ ಸೇವೆ ಸಲ್ಲಿಕೆ ಮಾಡಿದ್ದಾರೆ. ನಂತರ ದೇವಳದ ಪ್ರಾಂಗಣದಲ್ಲಿರುವ ಅಮ್ಮನವರ ಗುಡಿಗೆ ತೆರಳಿ ಅಲ್ಲಿ ಮಹಾಪೂಜೆ ಸಲ್ಲಿಕೆ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು


ನಾಲ್ವರು ಅರ್ಚಕರಿಗೆ ಪೂಜೆಯ ಬಗ್ಗೆ ಡಾ. ಹೆಗ್ಗಡೆ ಸೂಕ್ತ ಸೂಚನೆಗಳನ್ನು ನೀಡಿದ್ದಾರೆ. ನಂತರ ಸುಮಾರು 10 ನಿಮಿಷ ಮೋದಿ ಧ್ಯಾನ ಮಾಡುತ್ತಾರೆ ಅನ್ನೊ ಮಾಹಿತಿ ಕೂಡ ಇದೆ. ದೇವರ ದರ್ಶನ- ಪೂಜೆ ಸಲ್ಲಿಕೆಯಾದ ಮೇಲೆ ಕ್ಷೇತ್ರದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಜೊತೆ ಸಮಾಲೋಚನೆ ನಡೆಸಲಿದ್ದಾರೆ.
ಪ್ರಧಾನಿ ಮೋದಿ ಭೇಟಿಗೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಸಿಟಿ ರವಿ ಬಂದು ಪೂಜೆ ಸಲ್ಲಿಕೆ ಮಾಡಿದ್ದು, ಕ್ಷೇತ್ರದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಕುಟುಂಬದ ಆಪ್ತ 15 ಮಂದಿಯನ್ನು ದೇವಸ್ಥಾನದ ಒಳಗೆ ಬಿಡಲಾಗಿದೆ.

Leave a Response