ಗಡಿನಾಡು ಕಾಸರಗೋಡಿನ ಕನ್ನಡ ಶಾಲೆಗಳಿಗೆ ಮಲಯಾಳ ಶಿಕ್ಷಕರ ನೇಮಕದ ವಿರುದ್ಧ ವಿದ್ಯಾರ್ಥಿಗಳು, ಪೋಷಕರು ಹೋರಾಟ ನಡೆಸಿದ್ದಾರೆ.
ಕಾಸರಗೋಡಿನ ಬೇಕೂರು, ಪೆರಡಾಲ, ಕಾಯರ್ ಕಟ್ಟೆ ಶಾಲೆಗಳಿಗೆ ಮಲಯಾಳಂ ಶಿಕ್ಷಕರ ನೇಮಕವನ್ನು ಗಡಿನಾಡ ಕನ್ನಡ ಮಕ್ಕಳು ವಿರೋಧಿಸಿದ್ದಾರೆ. ನೇಮಕಾತಿಯ ಆದೇಶ ಪತ್ರ ಸಹಿತ ಶಿಕ್ಷಕರು ತಲಪಿದರೂ, ವಿದ್ಯಾರ್ಥಿಗಳು ಹಾಗೂ ಪೋಷಕರು ಆವರಣದೊಳಗೆ ಪ್ರವೇಶಿಸಲು ಅನುವು ಕೊಡಲಿಲ್ಲ.
ಇವರು ತೀವ್ರ ಪ್ರತಿಭಟನೆ ನಡೆಸಿದ್ದರಿಂದ ಹೋರಾಟಕ್ಕೆ ಮಣಿದ ಅಧಿಕಾರಿಗಳು ಕನ್ನಡ ಅರಿಯದ ಶಿಕ್ಷಕರನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ನೇಮಿಸದಿರಲು ಮತ್ತು ಈಗ ನೇಮಕಗೊಂಡಿರುವ ಶಿಕ್ಷಕರನ್ನು ತೆರಳುವಂತೆ ಆದೇಶ ನೀಡಿದ್ದಾರೆ. ಇದು ಕನ್ನಡಿಗರ ಹೋರಾಟಕ್ಕೆ ಸಿಕ್ಕ ಜಯವಾಗಿದೆ.