ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಇದೇ ಮೊದಲ ಬಾರಿಗೆ ಬಂಗ್ರ ಕೂಳೂರಿನ ಫಲ್ಗುಣಿ ನದಿ ತೀರದಲ್ಲಿ ಆಯೋಜಿಸಲಾಗಿರುವ ನದಿ ಉತ್ಸವಕ್ಕೆ ಎರಡನೇ ದಿನ ಜನಸಾಗರವೇ ಹರಿದು ಬಂದಿತ್ತು.
ಜನ ತಮ್ಮ ಜಂಜಾಟಗಳನ್ನು ಮರೆತು ಬೋಟಿಂಗ್, ಸರ್ಫಿಂಗ್, ಮುಂತಾದ ಸಾಹಸ ಕ್ರೀಡೆಗಳನ್ನು ಆಡಿ ಭಾನುವಾರದ ರಜೆಯನ್ನು ಫುಲ್ ಎಂಜಾಯ್ ಮಾಡಿದರು.
ಮಕ್ಕಳು ಗಾಳಿಪಟಗಳನ್ನು ಹಾರಿಸಿ ಸಂತೋಷಪಟ್ಟರು. ಈ ನದಿ ಉತ್ಸವದ ಆಕರ್ಷಣೆಗಳಲ್ಲಿ ಒಂದಾದ ಆಹಾರ ಮಳಿಗೆಯಲ್ಲಿ ಸೋಜಿ, ಸಿಯಾಳ, ಚುರುಮುರಿ, ಮೀನಿನ ಖಾದ್ಯ, ಸೀ ಫುಡ್‌ಗಳಿಗೆ ಜನರು ಮುಗಿಬಿದ್ದಿದ್ದರು.
ಒಟ್ಟಿನಲ್ಲಿ ಮೊದಲ ಬಾರಿಗೆ ಜಿಲ್ಲೆಯಲ್ಲಿ ನಡೆಯುತ್ತಿರುವ ನದಿ ಉತ್ಸವ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.